ವಿದ್ಯಾರ್ಥಿ ದಿಸೆಯಲ್ಲಿ ಹಾದಿ ತಪ್ಪಬಾರದು

HNP- 2
???????
Published on

ಹೊಳೆನರಸೀಪುರ: ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ವಿದ್ಯಾರ್ಥಿ ದಿಸೆಯಲ್ಲಿ ಹಾದಿ ತಪ್ಪಬಾರದು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಆರ್.ಜೆ.ಎಸ್. ಪ್ರವೀಣ್ ಹೇಳಿದರು. ಪಟ್ಟಣದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಇತ್ತೀಚೆಗೆ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪೋಕ್ಸೊ ಕಾಯಿದೆ ಕುರಿತ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನ ಎಂದರೆ ಅದು ಬದುಕಿನ ಸುವರ್ಣ ಯುಗ. ಈ ಅವಧಿಯಲ್ಲಿ ಕಲಿಕೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಅವರು ಸಲಹೆ ನೀಡಿದರು. ಇಂದಿನ ಮಕ್ಕಳು ನಾಳಿನ ಭವ್ಯ ಭಾರತದ ಸತ್ಪ್ರಜೆಗಳು. ಹಾಗಾಗಿ ನಾಳಿನ ಭವಿಷ್ಯ ಇಂದಿನ ಉತ್ತಮ ಅಧ್ಯಯನದಲ್ಲಿ ಅಡಕವಾಗಿದೆ ಎಂದು ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net