ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್, ರೇಂಬರ್ಸ್ ಮತ್ತು ಯುವ ರೆಡ್ ಕ್ರಾಸ್ ಘಟಕಗಳ ಉದ್ಘಾಟಿಸಿ, ಮಾತನಾಡಿದರು. ವಿದ್ಯಾರ್ಥಿಗಳ ಧ್ಯಾನದ ದೀವಿಗೆಯನ್ನು ಶಿಕ್ಷಕರು, ಪೋಷಕರು, ಹಿತೈಷಿಗಳು ಬೆಳೆಸುತ್ತಾರೆ ಎಂಬುದು ತಪ್ಪು ತಿಳುವಳಿಕೆ. ನಿಮ್ಮಗಳ ಧ್ಯಾನದ ದೀವಿಗೆಯ ಅಭ್ಯುಧಯಕ್ಕೆ ಕೇವಲ ಮಾರ್ಗದರ್ಶಕರು, ನೀವುಗಳು ಅವರುಗಳ ಮಾರ್ಗದರ್ಶನದಲ್ಲಿ ನಿಮ್ಮ ಜ್ಞಾನ ಹಾಗೂ ಸಾಮರ್ಥ್ಯ ವೃದ್ಧಿಸಿಕೊಳ್ಳುವುದರ ಜತೆಗೆ ಅವುಗಳ ಅನಾವರಣಕ್ಕೆ ನೀವುಗಳೇ ಶ್ರಮಿಸಬೇಕು. ನಿಮ್ಮ ಆತ್ಮಸ್ಥೆöÊರ್ಯ ಕುಂಟಿಸುವ ಹಲವು ವರ್ಗದ ಜನರು ಇರುತ್ತಾರೆ, ಇದ್ದಾರೆ. ಇಂತಹ ಸಂದರ್ಭದಲ್ಲಿ ನಿಮ್ಮಗಳ ಸಾಮರ್ಥ್ಯದ ಅನಾವರಣಕ್ಕೆ ಜವಾಬ್ದಾರಿಯುತ ನಡೆಯೂ ನಿಮ್ಮಲ್ಲಿ ಯಶಸ್ಸು ಮತ್ತು ಹೃದಯ ಶ್ರೀಮಂತಿಕೆಯ ನಡೆಗೆ ಸಾಕ್ಷಿಯಾಗುತ್ತದೆ ಎಂದರು. ಇಂದಿನ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಇತರೆ ವಿಷಯಗಳ ಕುರಿತು ಸುದೀರ್ಘವಾಗಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಪ್ರಗತಿಯ ಜತೆಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಅಗತ್ಯವಾದ ವಿಷಯಗಳ ಕುರಿತು ಅಗತ್ಯ ಮಾರ್ಗದರ್ಶನ ನೀಡಿದರು.