ಕಾನೂನು ಅರಿವು ಎಲ್ಲರಿಗೂ ಅಗತ್ಯ

HNP LAW Aware
Published on

ಹೊಳೆನರಸೀಪುರ : ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಹಾಗಾಗಿ ಎಲ್ಲರಿಗೂ ಕಾನೂನು ಅರಿವು ಅಗತ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷೆ ನಿವೇದಿತಾ ಮಹಾಂತೇಶ ಮುನವಳ್ಳಿ ಮಠ ಹೇಳಿದರು. ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ. ಶಿಶು ಅಭಿವೃದ್ಧಿ ಯೋಜನೆ ಇಲಾಖೆ, ಸರ್ಕಾರಿ ಗೃಹ ವಿಜ್ಞಾನ ಕಾಲೇಜು ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಜಾಲತಾಣಗಳ ಆಕರ್ಷಣೆಗೆ ಒಳಗಾಗಿ ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನ ಮಕ್ಕಳೂ

ಮನೆ ಬಿಟ್ಟು ಹೋಗುತ್ತಿದ್ದಾರೆ. ಅವರಿಗೆ ಇಷ್ಟವಾದವರೊಂದಿಗೆ ಮದುವೆಯಾಗುತ್ತಿದ್ದಾರೆ. ಕಾನೂನು ನಮ್ಮೆಲ್ಲರಿಗೂ ಹಲವು ಮೂಲಭೂತ ಹಕ್ಕುಗಳನ್ನು, ಸ್ವತಂತ್ರವನ್ನು ನೀಡಿದೆ. ಆದರೆ ಅದು ದುರ್ಬಳಕೆ ಆಗಬಾರದು. ಅಕ್ರಮ ತಡೆಯಲು ಕಾಯ್ದೆಗಳನ್ನು ಬಳಸಿಕೊಳ್ಳಬೇಕು ಎಂದರು. ಕಾನೂನಿನ ಎದುರು ನಾವೆಲ್ಲರೂ ಸಮಾನರು. ನಮ್ಮ ನೆಲದ ಕಾನೂನು ನಮಗೆ ಭದ್ರತೆ ನೀಡಿದೆ. ಕಾನೂನನ್ನು ಅನುಸರಿಸುವುದು ನಮ್ಮ ಕರ್ತವ್ಯ ಎಂದರು.

ಪೋಕ್ಸೋ, ಬಾಲ್ಯ ವಿವಾಹ ಕಾಯ್ದೆಗಳ ಬಗ್ಗೆ ಮಕ್ಕಳಿಗೆ ಅರಿವು ಇರಬೇಕು. ಗುಡ್ ಟಚ್ ಮತ್ತು ಬ್ಯಾಡ್ ಟಚ್ ಬಗ್ಗೆ ಜ್ಞಾನ ಇರಬೇಕು. ಯಾವುದೇ ಉದ್ದೇಶದಿಂದ ಪುರುಷರು ಹೆಣ್ಣು ಮಕ್ಕಳನ್ನು ಮುಟ್ಟಬಾರದು.

ಈ ಕುರಿತು ಮಕ್ಕಳಿಗೆ ಜಾಗೃತಿ ಮೂಡಿಸಬೇಕು ಎಂದು ಅವರು ಸಲಹೆ ನೀಡಿದರು. ತಹಸೀಲ್ದಾರ್ ರೇಣು ಕುಮಾರ್, ವಕೀಲ ಹರೀಶ್ ಮಾತನಾಡಿದರು. ಪ್ರಾಂಶುಪಾಲ ಅಶೋಕ್ ಕೃಷ್ಣಮೂರ್ತಿ, ಸಿಡಿಪಿಒ ಸುರೇಶ್, ವಕೀಲರ ಸಂಘದ ಅಧ್ಯಕ್ಷ ಶಿವಕುಮಾರ, ವಕೀಲ ಬಿಂದೇಶ್ವರ, ಕಾಲೇಜಿನ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net