ವಿದ್ಯಾರ್ಥಿಗಳು ಸಾಮಾಜಿಕ ಬದ್ಧತೆ ರೂಢಿಸಿಕೊಳ್ಳಬೇಕು

BLOOD 1
Published on

 ಹೊಳೆನರಸೀಪುರ: ವಿದ್ಯಾರ್ಥಿಗಳು ಸಾಮಾಜಿಕ ಬದ್ಧತೆ ರೂಢಿಸಿಕೊಳ್ಳಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಎಸ್.ಆರ್. ಮೂರ್ತಿ ಹೇಳಿದರು.ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಗುರುವಾರ ಚನ್ನರಾಯಪಟ್ಟಣದ ರೆಡ್‌ಕ್ರಾಸ್ ಸಂಸ್ಥೆ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ಅಪಘಾತ ಹಾಗೂ ಅನಾರೋಗ್ಯದ ತುರ್ತು ಸಂದರ್ಭದಲ್ಲಿ ನೊಂದವರಿಗೆ ರಕ್ತದ ಅವಶ್ಯಕತೆಯೇ ಪ್ರಮುಖವಾಗಿರುತ್ತದೆ. ಜೀವ ಉಳಿಸುವ ಕಳಕಳಿ ಯುವ ಜನರಲ್ಲಿ ರೂಢಿಗತ ಆಗಬೇಕು. ಹಾಗಾಗಿ ರಕ್ತದಾನ ಶ್ರೇಷ್ಠ ದಾನವಾಗಿದೆ ಎಂದರು. ರೆಡ್‌ಕ್ರಾಸ್ ಘಟಕ ಅಧ್ಯಕ್ಷ ಎಚ್.ಜಿ. ಭರತ್‌ಕುಮಾರ್ ಮಾತನಾಡಿ, ರಕ್ತವನ್ನು ದಾನಿಗಳಿಂದ ಪಡೆಯುವಾಗ 5 ರೀತಿಯ ಪರೀಕ್ಷೆ ನಡೆಸಿದ ನಂತರವೇ ಬ್ಯಾಂಕ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಯಾವುದೇ ಸೋಂಕಿತರು

ದಾನ ಮಾಡಲು ಅನರ್ಹರು. ದಾನಿಯ ದೈಹಿಕ ಸಾಮರ್ಥ್ಯದ ಅರಿವು ಪಡೆಯಲು ಮೊದಲು ರಕ್ತ ಪರೀಕ್ಷೆ ಮಾಡಿಯೇ ಸಂಗ್ರಹ ಕಾರ್ಯ ಮುಂದುವರಿಯುತ್ತದೆ. ಇದಕ್ಕೆ ತಗುಲುವ ವೆಚ್ಚಗಳನ್ನು ರೆಡ್ ಕ್ರಾಸ್ ಭರಿಸುತ್ತದೆ ಎಂದರು.

ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪುಟ್ಟೇಗೌಡ, ರೆಡ್‌ಕ್ರಾಸ್ ನಿರ್ದೇಶಕಿ ಡಾ.ಕೃತಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಚಾಲಕಿ ಪೂರ್ಣಿಮಾ, ಉಪನ್ಯಾಸಕ ಉದಯಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net