ಶಿಕ್ಷಣತಜ್ಞ ಎಚ್.ಎನ್.ಹೆಸರಿನಲ್ಲಿ ಪ್ರಾಧಿಕಾರ ರಚನೆ, ಮಾಜಿ ಸಚಿವರಿಗೆ ಅಧ್ಯಕ್ಷಗಾದಿ

9.jpg
Published on

ಚಿಕ್ಕಬಳ್ಳಾಪುರ: ಗೌರಿಬಿದನೂರು ವಿಧಾನಸಭಾ ಕ್ಷೇತ್ರದ ಹಿಂದಿನ ಚುನಾವಣೆಯಲ್ಲಿ ಸೋತರೂ ಕ್ಷೇತ್ರದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಲು ಶ್ರಮಿಸಿದ ಮಾಜಿ ಸಚಿವ ಎನ್.ಎಚ್. ಶಿವಶಂಕರರೆಡ್ಡಿಗೆ ನೂತನ ಡಾ.ಎಚ್.ನರಸಿಂಹಯ್ಯ ಅಭಿವೃದ್ಧಿ ಪ್ರಾಧಿಕಾರದ ಅಧ್ಯ ಸ್ಥಾನ ಸಿಕ್ಕಿದೆ.

ಹಿರಿಯ ನಾಯಕ ಶಿವಶಂಕರರೆಡ್ಡಿ ಕೃಷಿ ಸಚಿವ ಹಾಗೂ ವಿಧಾನಸಭೆ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ. ಸತತ 5 ಬಾರಿ ಗೌರಿಬಿದನೂರು ಕ್ಷೇತ್ರದ ಶಾಸಕರಾಗಿದ್ದ ಆಯ್ಕೆಯಾಗಿದ್ದ ಅವರು, ಕಳೆದ 2023ರ ಚುನಾವಣೆಯಲ್ಲಿ ಮೊದಲ ಬಾರಿಗೆ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿ ಗೌಡ ವಿರುದ್ಧ ಸೋತಿದ್ದರು.  ಸೋತರೂ ಕೈಬಿಡುವುದಿಲ್ಲ ಎಂದು ಸಿಎಂ, ಡಿಸಿಎಂ ಭರವಸೆ ನೀಡಿದ್ದರಿಂದ ಎನ್ಎಚ್ಎಸ್ ಇತರ ಪಕ್ಷಗಳತ್ತ ತಿರುಗಿ ನೋಡಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದರೂ ಟಿಕೆಟ್ ಸಿಗದಿದ್ದಕ್ಕೆ ಸಿಟ್ಟು ತೋರದೆ ಪಕ್ಷನಿಷ್ಠರಾಗಿ ಮುಂದುವರಿದರು. ಅದರ ಫಲವಾಗಿ ಇಂದು ಪ್ರಾಧಿಕಾರದ ಅಧ್ಯ ಸ್ಥಾನ ಲಭಿಸಿದೆ.

*ಮುನ್ನುಡಿ ಬರೆದಿದ್ದೆ ಎನ್ಎಚ್ಎಸ್
ಡಾ.ಎಚ್.ಎನ್.ಪ್ರಾಧಿಕಾರ ರಚಿಸಬೇಕು. ತಾಲೂಕಿನ ಕೋಟಾಲದಿನ್ನೆ ಸಮೀಪದ ಡಾ.ಎಚ್.ಎನ್. ಸೈನ್ಸ್ ಪಾರ್ಕ್, ವಿದುರಾಶ್ವತ್ಥದ ಸ್ವಾತಂತ್ರ್ಯ ಯೋಧರ ಹುತಾತ್ಮ ಸ್ಮಾರಕ ಹಾಗೂ ವೀರಸೌಧ, ಡಾ.ಎಚ್.ಎನ್.ಕಲಾ ಭವನ, ಡಾ.ಅಂಬೇಡ್ಕರ್ ಅಧ್ಯಯನ ಕೇಂದ್ರ ಇತರ ಪ್ರದೇಶಗಳನ್ನು ಪ್ರಾಧಿಕಾರದ ವ್ಯಾಪ್ತಿಗೆ ಒಳಪಡಿಸಿ ಅಭಿವೃದ್ಧಿಪಡಿಸಬೇಕು ಎಂದು ಮೊದಲಿಗೆ ಸರ್ಕಾರದ ಗಮನ ಸೆಳೆದಿದ್ದೇ ಎನ್.ಎಚ್. ಶಿವಶಂಕರರೆಡ್ಡಿ. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಅಷ್ಟಕ್ಕೆ ಬಿಡದೆ ಬಜೆಟ್ ನಲ್ಲಿ ಘೋಷಣೆಯಾಗುವವರೆಗೆ ಸರ್ಕಾರದ ಬೆನ್ನು ಹತ್ತಿದ್ದರು. ಅದರ ಫಲವಾಗಿ ಸರ್ಕಾರ ಪ್ರಾಧಿಕಾರವನ್ನು ಅಸ್ತಿತ್ವಕ್ಕೆ ತರುವ ಜತೆಗೆ ಎನ್ಎಚ್ಎಸ್ ಅವರನ್ನು ಅಧ್ಯಕರನ್ನಾಗಿ ಮಾಡಿ ಹೊಸ ಜವಾಬ್ದಾರಿ ವಹಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net