ದೇಶದ ಭದ್ರತೆಯಲ್ಲಿ ಇಂಜಿನಿಯರ್‌ಗಳಾದ ಪಾತ್ರ ಹಿರಿದು

1663237923255nnn
Published on

ಹೊಳಲ್ಕೆರೆ(ಚಿತ್ರದುರ್ಗ)ಸರ್.ಎಂ.ವಿಶ್ವೇಶ್ವರಯ್ಯ ಅವರು ಪ್ರಪಂಚದಲ್ಲೇ ದೂರದೃಷ್ಟಿಯುಳ್ಳ ಇಂಜಿನಿಯರ್ ಹಾಗೂ ಆಡಳಿತಾಧಿಕಾರಿಯಾಗಿ ದ್ದರು ಎಂದು ಡಾ.ಕಾವ್ಯಶ್ರೀ ಹೇಳಿದರು.

ಹೊಳಲ್ಕೆರೆ ತಾಲೂಕು ಕಸಾಪದಿಂದ ಗುಂಡೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಗುರುವಾರ ವಿಶ್ವೇಶ್ವರಯ್ಯ ಜನ್ಮ ದಿನ ಆಚರಣೆ ಹಾಗು ಮಕ್ಕಳ ಸಾಹಿತ್ಯ ವೇದಿಕೆ ಉದ್ಘಾಟನೆಯಲ್ಲಿ ಮಾತನಾಡಿದ ಅವರು ದೇಶದ ಭದ್ರತೆಯಲ್ಲಿ ಇಂಜಿನಿಯರ್‌ಗಳ ಪಾತ್ರ ಹಿರಿದಾದುದು. ವಿಜ್ಞಾನ ತಂತ್ರ ಜ್ಞಾನ ಇರದೆ ಇಂದು ಯಾವುದೇ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಇಂಜಿನಿಯರ್‌ಗಳು ದೇಶದ ಕಟ್ಟುವಿಕೆಯಲ್ಲಿ ಪ್ರಮುಖ ಸ್ಥಾನ ಹೊಂದಿದ್ದಾರೆ ಎಂದರು.

ಕಸಾಪ ತಾಲೂಕು ಅಧ್ಯಕ್ಷಎನ್.ಶಿವಮೂರ್ತಿ ಮಾತನಾಡಿ, ಕಸಾಪ ಸ್ಥಾಪನೆ,ಕೆಆರ್‌ಎಸ್ ನಿರ್ಮಾಣ ಯೋಜನೆಗಳನ್ನು ರೂಪಿಸಿದ್ದ ವಿಶ್ವೇಶ್ವರಯ್ಯ ಅವರು ಪರಿಶ್ರಮ್ಕ ಮತ್ತು ಸಮಯಕ್ಕೆ ಬೆಲೆ ನೀಡುತ್ತಿದ್ದರು. ವಿಶ್ವೇಶ್ವರಯ್ಯ ಅವರು ಎಲ್ಲ ಪೀಳಿಗೆಯವರಿಗೂ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಅತಿಥಿಗಳಾದ ಪಾಲಣ್ಣ ಹಾಗೂ ಅಂಜನ್‌ಕುಮಾರ್ ಇಂಜಿನಿಯರ್ ದಿನಾಚರಣೆ ಕುರಿತು ಮಾತನಾಡಿದರು. ಗುಂಡೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳ ಸಾಹಿತ್ಯ ವೇದಿಕೆಯನ್ನು ಗುಂಡೇರಿ ಗ್ರಾಪಂ ಉಪಾಧ್ಯಕ್ಷೆ ಪರಿಮಳ ನಾಡಿಗ್ ಉದ್ಘಾಟಿಸಿದರು. ಹೊಳಲ್ಕೆರೆ ತಾ.ಪಂ. ಕಾರ‌್ಯ ನಿರ್ವಾಹಕ ಇಂಜಿನಿಯರ್ ಆದ ಇ.ಅಂಜನ್‌ಕುಮಾರ್,ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ಪಾಲಣ್ಣ,ತಿಪ್ಪೇಸ್ವಾಮಿ ಹಾಗೂ ಡಾ.ಕಾವ್ಯಶ್ರೀ ಅವರನ್ನು ಅಭಿನಂದಿಸಲಾಯಿತು.

ಕಸಾಪ ತಾಲೂಕು ಗೌರವ ಕಾರ್ಯದರ್ಶಿಗಳಾದ ರುದ್ರಪ್ಪ,ಆರ್,ನಾಗೇಶ್,ಪ್ರೌಢಶಾಲೆ ಮುಖ್ಯಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಆರ್. ಶಾಂತಪ್ಪ,ಬಡ್ತಿ ಮುಖ್ಯಶಿಕ್ಷಕರ ಸಂಘ ಅಧ್ಯಕ್ಷ ಟಿ.ವರದರಾಜ್,ಯುವ ವೇದಿಕೆ ಅಧ್ಯಕ್ಷ ಅಣ್ಣಪ್ಪ,ಗ್ರಾ.ಪಂ.ಅಧ್ಯಕ್ಷ ಬಂಗಾರಪ್ಪ,ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರಂಗಸ್ವಾಮಿ,ಮಂಜುನಾಥ್,ಗುಂಡೇರಿ ಡಾ.ಮನೋಜ್,ಶಿಕ್ಷಕ ಚಂದ್ರನಾಯ್ಕ,ವನಿತಾ,ರವಿಕುಮಾರ್,ರೂಪಕುಮಾರಿ, ರಾಘವೇಂದ್ರ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net