ಜಾಗತಿಕ ಮಟ್ಟಕ್ಕೆ ಎಚ್‌ಕೆಇ ಸಂಸ್ಥೆ

1003 KLB 05
Published on

ಕಲಬುರಗಿ: ಬಡ ಮಾಸ್ತರನ ಮಗನಾಗಿ, ಸಂಸ್ಥೆಯ ಸದಸ್ಯರ, ನೌಕರರ ಸಮಸ್ಯೆ ಅರಿತಿದ್ದು, ಹಳಿ ತಪ್ಪಿರುವ ಎಚ್‌ಕೆಇ ಸಂಸ್ಥೆಯನ್ನು ಜಾಗತಿಕ ಮಟ್ಟಕ್ಕೆ ಕೊಂಡ್ಯೊಯ್ಯುತ್ತೇವೆ ಎಂದು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಡಾ.ಎಸ್.ಬಿ.ಕಾಮರಡ್ಡಿ ವಾಗ್ದಾನ ನೀಡಿದರು.

ಹೈಕ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ಡಾ.ಕಾಮರಡ್ಡಿ ಪೆನಾಲ್‌ನ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿ, ಆಡಳಿತ ಮಂಡಳಿ ಸದಸ್ಯನ್ನಾಗಿ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಲು ಆಗಲಿಲ್ಲ. ಅಧ್ಯಕ್ಷರು ಸರ್ವಾಧಿಕಾರಿಯಂತೆ ವರ್ತಿಸಿ, ನನಗೆ ಅವಕಾಶವೇ ನೀಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಬಾರಿಯೇ ಚುನಾವಣೆಗೆ ನಿಲ್ಲಲ್ಲು ಸಿದ್ಧವಾಗಿದ್ದೆ. ಆದರೆ ಮುಂದಿನ ಬಾರಿ ನಿಲ್ಲಿ. ಈ ಬಾರಿ ನನಗೆ ಅವಕಾಶ ನೀಡಿ ಎಂದಿದ್ದರು. ಆದರೆ ಈಗ ನಮ್ಮ ವಿರುದ್ಧವೇ ನಿಂತ್ತಿದ್ದಾರೆ. ಇಂತಹ ಮಾತು ಮರೆತವರಿಗೆ, ಅವಕಾಶವಾದಿಗಳಿಗೆ, ಸರ್ವಾಧಿಕಾರಿ ಧೋರಣೆ ಉಳ್ಳವರಿಗೆ ಪ್ರೋತ್ಸಾಹಿಸಬೇಡಿ ಎಂದು ಹೇಳಿದರು.

ಉಪಾಧ್ಯಕ್ಷ ಸ್ಥಾನ ಅಭ್ಯರ್ಥಿ ನಿತಿನ ಜವಳಿ ಮಾತನಾಡಿ, ೨೦೧೨ರಲ್ಲಿ ಹೊಸ ಸದಸ್ಯರು ಬಂದಿದ್ದೇವು ಸಂಸ್ಥೆ ಗತವೈಭವದಲ್ಲಿದೆ ಎಂದುಕೊಂಡಿದ್ದೇವು. ಅಧ್ಯಕ್ಷರಾದವರು ಹಾದಿ ತಪ್ಪಿಸಿದ್ದರು. ಅದನ್ನು ನಿಯಂತ್ರಿಸುವ ವಾಗ್ದಾನ ನೀಡುತ್ತೇನೆ ಎಂದರು. ಮಾಜಿ ಸಂಸದ ಡಾ.ಬಿ.ಜಿ.ಜವಳಿ, ಸುಭಾಷ ಶಹಾ, ಆಡಳಿತ ಮಂಡಳಿ ಸದಸ್ಯ ಸ್ಥಾನದ ಅಭ್ಯರ್ಥಿ ವಿನಯ ಕಮಲಾಪುರ, ಅನೀಲಕುಮಾರ, ಡಾ.ಶಿವಾನಂದ ದೇವರಮನಿ, ಡಾ.ಸುಧಾ ಹಾಲಕಾಯಿ, ನಾಗಣ್ಣ ಘಂಟಿ, ಮಲ್ಲಿಕಾರ್ಜುನ ಕಪಾಟೆ, ದೊಡ್ಡಪ್ಪ ನಿಷ್ಠಿ, ಶಶಿಕಾಂತ ಸೊರಡೆ, ದಿನೇಶ ಜಿ.ಡಿ.ಅಣಕಲ್, ಡಾ.ಪ್ರಶಾಂತ ಹರಸೂರ, ರವಿಕುಮಾರ ಸರಸಂಬಿ, ಶಿವಾನಂದ ಚುಕ್ಕಿ, ಡಾ.ಅಲ್ಲಮಪ್ರಭು ಆನಂದವಾಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net