ದೂದಪೀರಾಂ ದರ್ಗಾಕ್ಕೆ ಎಚ್ಕೆ ಭೇಟಿ

14 LXFR 3
Published on

ಲಕ್ಷ್ಮೇಶ್ವರ: ಪಟ್ಟಣದ ಹಿಂದು- ಮುಸ್ಲಿಮರ ಭಾವೈಕ್ಯ ಕೇಂದ್ರವಾಗಿರುವ ದೂದಪೀರಾಂ ದರ್ಗಾಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಭಾನುವಾರ ಭೇಟಿ ನೀಡಿದರು. ದೂದಪೀರಾಂ 136ನೇ ಉರುಸು 3 ದಿನಗಳಿಂದ ನಡೆಯುತ್ತಿದ್ದು, ದೂದನಾನಾ ಮಹಾತ್ಮರ ಗದ್ದುಗೆಗೆ ಸಚಿವರು ಕಾಣಿಕೆ ಸಮರ್ಪಿಸಿದರು.

ಬಳಿಕ ಮಾತನಾಡಿದ ಸಚಿವರು, ಲಕ್ಷ್ಮೇಶ್ವರ ಪುಣ್ಯಭೂಮಿಯಾಗಿದೆ. ಎಲ್ಲ ಜಾತಿ, ಮತದ ಮಹಾಪುರುಷರು ಇಲ್ಲಿ ಜನಿಸಿರುವುದರಿಂದ ಭಾವೈಕ್ಯದ ನಾಡೆಂದು ಹೆಸರು ಬಂದಿದೆ. ಐತಿಹಾಸಿಕ ಶ್ರೀ ಸೋಮೇಶ್ವರ ದೇವಸ್ಥಾನ, ಮುಕ್ತಿಮಂದಿರ ಹಾಗೂ ದೂದನಾನಾ ದರ್ಗಾದಿಂದ ಪಟ್ಟಣದ ಕೀರ್ತಿ ಹೆಚ್ಚಿದೆ. ಇಲ್ಲಿನ ಭಾವೈಕ್ಯ ಪರಂಪರೆ ರಾಜ್ಯಕ್ಕೆ ಮಾದರಿಯಾಗಲಿ ಎಂದರು.

ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಪೀರದೋಸ್ ಆಡೂರ, ದರ್ಗಾ ಕಮಿಟಿ ಅಧ್ಯಕ್ಷ ಸುಲೇಮಾನಸಾಬ್ ಕಣಕೆ, ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಯುವ ಮುಖಂಡ ಆನಂದಸ್ವಾಮಿ ಗಡ್ಡದೇವರಮಠ, ಜಯಕ್ಕ ಕಳ್ಳಿ, ರಾಜಣ್ಣ ಕುಂಬಿ, ಸತೀಶಗೌಡ ಪಾಟೀಲ, ವಿರೂಪಾಕ್ಷಪ್ಪ ಪಡಗೇರಿ, ರಾಜು ಮಡಿವಾಳರ, ಎಸ್.ಕೆ. ಹವಾಲ್ದಾರ, ಎಂ.ಎಂ. ಗದಗ, ಮಹೇಶ ಹೊಗೆಸೊಪ್ಪಿನ, ಈರಣ್ಣ ಅಂಕಲಕೋಟಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net