ಎಚ್.ಕೆ.ವೀರಣ್ಣಗೌಡರು ಜನಮಾನಸದಲ್ಲಿ ಉಳಿದಿರುವ ಮಹಾನ್ ಚೇತನ

01M.D.R.3
Published on

ಮದ್ದೂರು: ಎಚ್.ಕೆ.ವೀರಣ್ಣಗೌಡರು ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕವಾಗಿ ಅವಿಸ್ಮರಣೀಯ ಸಾಧನೆಗೈದು ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿರುವ ಮಹಾನ್ ಚೇತನ ಎಂದು ಸಾಹಿತಿ ಹಾಗೂ ಚಿಂತಕ ರಮೇಶ್ ಗುಬ್ಬಿಗೂಡು ಮೆಚ್ಚುಗೆ ವ್ಯಕ್ತಪಡಿಸಿದರು.


ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರೃ ಹೋರಾಟಗಾರ, ಮಾಜಿ ಸಂಸದ, ರಾಷ್ಟ್ರೀಯ ಕಾಂಗ್ರೆಸ್ ಮುತ್ಸದ್ದಿ, ಕೀರ್ತಿಶೇಷ ಎಚ್.ಕೆ.ವೀರಣ್ಣಗೌಡರ 125ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.


ಎಚ್.ಕೆ.ವೀರಣ್ಣಗೌಡರ ಸಾಧನೆ ಭಾಷಣಕ್ಕೆ ಮಾತ್ರ ಸೀಮಿತವಾಗದೆ, ಅವರ ಪರಿಶ್ರಮದ ಹಾದಿ, ಅವರ ಕೊಡುಗೆಗಳನ್ನು ಕರ್ನಾಟಕ ರಾಜ್ಯ ಪಠ್ಯ ಪುಸ್ತಕ ಪ್ರಾಧಿಕಾರದ ಗಮನಕ್ಕೆ ತರುವ ಮೂಲಕ ಪದವಿ ವಿದ್ಯಾರ್ಥಿಗಳ ಪಠ್ಯಪುಸ್ತಕದಲ್ಲಿ ಅವರ ಸಾಧನೆಯನ್ನು ಅಚ್ಚಳಿಯದಂತೆ ಉಳಿಯುವ ಮಹತ್ವದ ಕಾರ್ಯ ಆಗಬೇಕಾಗಿದೆ. ಆ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅವರ ಸಾಧನೆ ದಾರಿದೀಪವಾಗಬೇಕು ಎಂದರು.


ಸಂಸ್ಥೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಮಾತನಾಡಿ, ಎಚ್.ಕೆ.ವೀರಣ್ಣಗೌಡರ ಜೀವನ ಸಾಧನೆಯ ವಿವಿಧ ಆಯಾಮಗಳನ್ನು ಅವರ ದಿಟ್ಟತನ, ಆತ್ಮಸ್ಥೈರ್ಯ, ಅವರ ಹೋರಾಟದ ಬದುಕನ್ನು ಸ್ಮರಿಸಿದರು.


ಬೆಸಗರಹಳ್ಳಿ ಮಾನಸ ವಿದ್ಯಾಸಂಸ್ಥೆಯ ಮುಖ್ಯಸ್ಥ ವಿ.ಕೆ.ಜಗದೀಶ್ ಅವರು ಎಚ್.ಕೆ.ವೀರಣ್ಣಗೌಡರ ಜೀವನ, ಸಾಧನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಹಿರಿಯ ಸ್ವಾತಂತ್ರೃ ಹೋರಾಟಗಾರರಾದ ಕೆ.ಟಿ.ಚಂದು ಅವರು ಎಚ್.ಕೆ.ವೀರಣ್ಣಗೌಡರ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ಕಾರ್ಯದರ್ಶಿ ಸಿ.ಅಪೂರ್ವ ಚಂದ್ರ, ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಸುನಿಲ್‌ಕುಮಾರ್, ಸಂಸ್ಥೆ ಹಿರಿಯ ವಿದ್ಯಾರ್ಥಿ ದಿನೇಶ್ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net