

ಜಿಲ್ಲೆಯಲ್ಲಿರುವ ಕ್ರೀಡಾ ಸೌಕರ್ಯಗಳನ್ನು ಸದುಪಯೋಗ ಪಡೆಸಿಕೊಂಡು ರಾಷ್ಟ್ರೀಯ, ಅಂತರಾಷ್ಟ್ರೀಯ ತಂಡದಲ್ಲಿ ಪಾಲ್ಗೊಂಡು ಜಿಲ್ಲೆಗೆ ಹೆಮ್ಮೆತರಬೇಕು: ಸಚಿವ ಎಚ್ ಕೆ ಪಾಟೀಲ
ಗದಗ: ಕ್ರೀಡಾಪಟುಗಳಿಗೆ ಗೆಲವು ಮಾತ್ರ ಮುಖ್ಯವಲ್ಲ ಕ್ರೀಡಾ ಮನೋಭಾವದಿಂದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ಹೇಳಿದರು.
ನಗರದ ಕೆ.ಎಚ್ ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರುಗಳ ಸಹಯೋಗದಲ್ಲಿ ಜರುಗಿದ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗದಗ ಜಿಲ್ಲೆಯಲ್ಲಿ ಏರ್ಪಡಿಸಿದ ಬೆಳಗಾವಿ ವಿಭಾಗ ಮಟ್ಟದ ದಸರಾ ಕ್ರೀಡಾಕೂಟವು ಸಮಾಧಾನಕರ ವಾತಾವರಣದಲ್ಲಿ ನಡೆಯುತ್ತಿವೆ ಜಿಲ್ಲೆಯ ಆಶಾಕಿರಣವಾಗಿರುವ ಕ್ರೀಡಾಪಟುಗಳು ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಕಂಚು ಬೆಳ್ಳಿ ಬಂಗಾರ ಪದಕವನ್ನು ಗಳಿಸಿ ಜಿಲ್ಲೆಯ ಜನತೆ ಅಭಿಮಾನ ಪಡುವ ಹಾಗೇ ಯುವ ಪೀಳಿಗೆ ನಡೆದುಕೊಳ್ಳುತ್ತಿದೆ ಎಂದರು.
ಕ್ರೀಡಾಪಟುಗಳ ಆಟದ ಸಾಮರ್ಥ್ಯದಿಂದ ಕ್ರೀಡಾ ಕ್ಷೇತ್ರದಲ್ಲಿ ಎತ್ತರರಕ್ಕೆರಲು ಬೇಕಾದ ಸೌಕರ್ಯಗಳನ್ನು 2ಕೋಟಿ ವೆಚ್ಚದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಪುಟ್ಬಾಲ್ ಟರ್ಪ ಮೈದಾನ,ಫೆಡ್ ಲೈಟ್,ಮತ್ತು ವಿವಿಧ ಅಭಿವೃದ್ಧಿ ಕಾಮಗಾರಿ ಮತ್ತು ಜಿಲ್ಲಾ ಒಳಾಂಗಣ ಕ್ರೀಡಾಂಗಣ ದಲ್ಲಿ ವುಡನ್ ಪ್ಲೋರಿಂಗ್ ಲೈಟಿಂಗ್, ಹಾಗೂ ಗದಗ ತಾಲೂಕ ಮುಳಗುಂದ ಪಟ್ಟಣದಲ್ಲಿ ಈಜುಗೋಳ ನಿರ್ಮಾಣ ಕಾಮಗಾರಿ ಆದಷ್ಟು ಬೇಗನೆ ಪ್ರಾರಂಭಗೊಳ್ಳುತ್ತವೆ ಎಂದು ನುಡಿದರು.
ಗದಗ ಜಿಲ್ಲೆಯ ಅಂತರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಕ್ರೀಡಾಪಟು ಪವಿತ್ರಾ ಕುರ್ತಕೋಟಿ, ರಾಷ್ಟ್ರೀಯ ಮಟ್ಟದಲ್ಲಿ ಬೆಳ್ಳಿ ಪದಕ ವಿಜೇತರಾದ ಕರೆಪ್ಪ ಹೆಗಡೆ,ಸ್ಟ್ಯಾಲಿನ್ ಗೌಡರ,ಕುಸ್ತಿ ಕ್ರೀಡೆಯ ರಾಷ್ಟ್ರೀಯ ಕ್ರೀಡಾಪಟುಗಳಾದ ತೇಜಸ್ವಿನಿ ಬಿಂಗಿ,ಕಾವ್ಯಾ ಜಾಧವ,ಆರೀಫಾ ಕುಕನೂರ, ಖೇಲೊ ಇಂಡಿಯಾದಲ್ಲಿ ಕಂಚಿನ ಪದಕ ಪಡೆದ ಭುವನೇಶ್ವರಿ ಕೊಳಿವಾಡ,ರಾಹುಲ ಸಿದ್ದಮ್ಮನಹಳ್ಳಿ.
ಹಾಕಿ ಕ್ರೀಡೆಯ ಮಿನಿ ಓಲಂಪಿಕ್ ನಲ್ಲಿ ಬೆಳ್ಳಿ ಪದಕ ಪಡೆದ ಸುಜಲ ಕೊರವರ ಗೋವಿಂದಪ್ಪ ,ಮಲ್ಲು ಹಾಗು ದಕ್ಷಿಣ ವಲದಲ್ಲಿ ಬಂಗಾರದ ಪದಕ ಪಡೆದ ಅಖಿಲ ಮುಟಗಾರ,ಆದಿತ್ಯ ಮುಟಗಾರ,ನೇಹಾ ಮುಟಗಾರ ಹೀಗೆ ವಿವಿಧ ಕ್ರಿಡಾಪಟುಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡಿ ಗದಗ ಜಿಲ್ಲೆಗೆ ಹೆಸರನ್ನು ತಂದಿದ್ದು ಹೆಮ್ಮಯ ವಿಷಯ ಜಿಲ್ಲೆಯಲ್ಲಿರುವ ಕ್ರೀಡಾ ಸೌಕರ್ಯಗಳನ್ನು ಸದುಪಯೋಗ ಪಡೆದು ಕೊಂಡು ಬರುವ ದಿನಮಾನಗಳಲ್ಲಿ ರಾಷ್ಟ್ರೀಯ ಹಾಕಿ ತಂಡದಲ್ಲಿ ಭಾಗವಹಿವಲ್ಲಿ ಪ್ರಯತ್ನ ಮಾಡಿ ಎಂದು ನುಡಿದರು.
ವಿವಿಧ ಜಿಲ್ಲೆಯಿಂದ ವಿಭಾಗ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಆಗಮಿಸಿದ ಎಲ್ಲಾ ಕ್ರೀಡಾಪಟುಗಳು ,ಕ್ರೀಡಾ ಮನೋಭಾವದಿಂದ ಆಟ ಆಡಬೇಕೆಂದು ಎಲ್ಲಾ ಕ್ರೀಡಾ ಪಟುಗಳಿಗೆ ಶುಭ ಕೋರಿದರು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಶರಣು ಗೋಗೆರಿ ಸ್ವಾಗತಿಸಿ ಮಾತನಾಡಿ ಜಿಲ್ಲೆಯ ಮಹತ್ಮಾಗಾಂಧಿ ಕ್ರೀಡಾಂಗಣದಲ್ಲಿ ಹಾಕಿ ಕ್ರೀಡಾಂಗಣ, ನಗರದ ಕೆ.ಎಚ್ ಪಾಟೀಲ ಕ್ರೀಡಾಂಗಣದಲ್ಲಿ ಪುಟ್ಬಾಲ್, ಮತ್ತು ಒಳಾಂಗಣ ಕ್ರೀಡಾಂಗಣದಲ್ಲಿ ಕಬ್ಬಡ್ಡಿ ಏರ್ಪಡಿಸಲಾಗಿದೆ ಎಂದು ಕ್ರೀಡಾಪಟುಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾದ ಅಕ್ಬರ್ ಸಾಬ ಬಬರ್ಚಿ,ಬಿ ಬಿ ಅಸೂಟಿ,ಸಿದ್ದು ಪಾಟೀಲ, ಎಂ ಸಿ ಶೇಖ್,ಅಶೋಕ ಮಂದಾಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವೆಂಕಟೇಶ ಆಲ್ಕೊಡ ಹಾಗು ತಂಡದಿಂದ ಸಂಗೀತ ಪ್ರಸ್ತುತ ಪಡಿಸಿದರು. ಕಾರ್ಯಕ್ರಮವನ್ನು ಬಾಹುಬಲಿ ಜೈನ್ ನಿರ್ವಹಿಸಿದರು.