ಸಿಸಿಪಿ ಹೇಳಿಕೆಗೆ ಎಚ್.ಕೆ. ಪಾಟೀಲ ಪ್ರತಿಕ್ರಿಯೆ.

25GDG01A
Published on

ಗದಗ:

ಬಜೆಟ್ ನಲ್ಲಿ ಕಿಸಾನ್ ಸಮ್ಮಾನ್, ರೈತ ವಿದ್ಯಾ ನಿಧಿ, ಮಠಗಳ ಅನುದಾನಕ್ಕೆ ಕಡಿತ ಹಾಕಿದ್ದಾರೆ ಎಂಬ ಸಿ.ಸಿ. ಪಾಟೀಲ ಆರೋಪಕ್ಕೆ ಸಚಿವ ಎಚ್.ಕೆ. ಪಾಟೀಲ ಕಿಡಿ ಕಾರಿದ್ದಾರೆ. 

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು. ಬಜೆಟ್ ನಲ್ಲಿ ಕಡಿತ ಮಾಡಿದ್ದೇವೆ ಎಂದು ಉಲ್ಲೇಖಿಸಲಾಗಿದೆಯೇ ಎಂದು ಮರು ಪ್ರಶ್ನೆ ಹಾಕಿದರು. 5 ಗ್ಯಾರಂಟಿ ಯೋಜನೆಗಳು ಯಶಸ್ವಿ ಆಗಿರುವುದನ್ನು ಸಹಿಸಿಕೊಳ್ಳಲು ಬಿಜೆಪಿ ಮುಖಂಡರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಯುವನಿಧಿ ಮೂಲಕ ಲಕ್ಷಾಂತರ ನಿರುದ್ಯೋಗಿಗಳಿಗೆ ನೆರವು ಒದಗಿಸಲಾಗುತ್ತಿರುವುದನ್ನು ಕಂಡು ಅವರಲ್ಲಿ ಜಿಗುಪ್ಸೆ ಉಂಟಾಗುತ್ತಿದೆ. ರೈತರಿಗೆ ನೀಡಬೇಕಾದ ಅನುದಾನಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಕತ್ತರಿ ಹಾಕಿಲ್ಲ ಮತ್ತು ಎಲ್ಲೂ ಆದೇಶ ಮಾಡಿಲ್ಲ. ಆರೋಪಕ್ಕೆ ಆಧಾರಗಳು ಇರಬೇಕು ಎಂದು ಜಿಲ್ಲಾ ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net