

ಗದಗ: "ಕಪ್ಪತಗುಡ್ಡ ಈಗ ಹೆಂಗಿದೆಯೋ ಹಂಗ ಉಳಿಬೇಕು' ಎಂಬುದು ನನ್ನ ದೃಢವಾದ ಸಂಕಲ್ಪ ಹಾಗೂ ಈ ಭಾಗದ ಜನರ ಆಶಯವು ಅದೇ ಆಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಬುಧವಾರ ನಡೆದ ಸುದ್ದಿಗೋಷ್ಟಿಯಲ್ಲಿ ಕಪ್ಪತಗುಡ್ಡದ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಡೆಸಲು ವನ್ಯಜಿವಿ ಮಂಡಳಿ ಮುಂದಿರುವ ಪ್ರಸ್ತಾವನೆಗಳ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಕಪ್ಪತಗುಡ್ಡ ವಿಚಾರವಾಗಿ ಸ್ಪಷ್ಟ ಅಭಿಪ್ರಾಯ ಹೊಂದಿದ್ದೇನೆ. ಅಲ್ಲಿ ಗಣಿಗಾರಿಕೆ ನಡೆಸಬಾರದು. ಕಪ್ಪತಗುಡ್ಡ ಪ್ರವಾಸಿಗರಿಗೆ ಬಳಕೆ ಆಗಬೇಕೆ ವಿನಹ ಗಣಿಗಾರಿಕೆ ನಡೆಸಲು ಅಲ್ಲ. ಕೆಲ ಜನರು ಗಣಿಗಾರಿಕೆಗೆ ಒಲವು ತೋರಿರಬಹುದು. ಅದು ಅವರ ನೀಲುವಾಗಿರಬಹುದು. ಆದರೆ, ಬಹುತೇಕ ಜನರು ಕಪ್ಪತಗುಡ್ಡದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಬಾರದು ಎಂಬ ನೀಲು ಹೊಂದಿದ್ದಾರೆ ಎಂದ ಅವರು, ಕಪ್ಪತಗುಡ್ಡ ಪ್ರವಾಸಿಗರಿಗೆ ಆಧ್ಯತೆ ಇದೆ ವಿನಹ ಬೇಟೆ ಆಡುವರಿಗೆ ಅಲ್ಲ ಎಂದು ಪರೋಕ್ಷವಾಗಿ ಗಣಿ ಮಾಲೀಕರಿಗೆ ಕುಟುಕಿದರು.