

ವಿಜಯವಾಣಿ ಸುದ್ದಿಜಾಲ ಗದಗ
ತ್ವರಿತ ನ್ಯಾಯದಾನಕ್ಕಾಗಿ ನ್ಯಾಯಾಲಯಗಳಲ್ಲಿ ಆಧುನಿಕ ತಂತ್ರಜ್ಞಾನ ಉಪಯೋಗ, ಸೌಲಭ್ಯಗಳ ಸೃಷ್ಠಿ ಮತ್ತು ಕಾನೂನಿನಲ್ಲಿ ಕೆಲವು ಬದಲಾವಣೆ ಮಾಡಲಾಗುತ್ತಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗದಲ್ಲಿ ಬುಧವಾರ ಜರುಗಿದ ಕರ್ನಾಟಕ ರಾಜ್ಯೋತ್ಸವ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕಾನೂನು ಸಚಿವಾಲಯದ ಹೊಸ ನೀತಿ ಪತ್ರವನ್ನು ಹೊರತರಲಾಗುತ್ತಿದೆ. ಹೊಸ ನೀತಿ ಪತ್ರದಲ್ಲಿ ಕೆಲ ನೀತಿಗಳನ್ನು ಮಾರ್ಪಾಡು ಮಾಡಿ, ಸಾಮಾನ್ಯ ವರ್ಗದ ಜನರಿಗೆ ತ್ವರಿತ ನ್ಯಾಯದಾನ ಆಗುವಂತೆ ಸೌಲಭ್ಯ ಸೃಷ್ಟಿಸಲಾಗುತ್ತಿದೆ. ಭಾರತದ ಸಂವಿಧಾನದ ಆಶಯದಂತೆ ಉತ್ತಮ ಆಡಳಿತ ನೀಡಿ ನ್ಯಾಯದಾನವನ್ನು ಮನೆಬಾಗಲಿಗೆ ಮುಟ್ಟಿಸುವ ನಿಟ್ಟಿನಲ್ಲಿ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸಲು ದೃಢ ಹೆಜ್ಜೆ ಇಡಲಾಗಿದೆ. ಪ್ರವಾಸೋದ್ಯಮ ೇತ್ರದಲ್ಲಿ ಸೌಲಭ್ಯಸೃಷ್ಠಿಸಿ ಬಡವರು, ಮಧ್ಯಮ ವರ್ಗದವರು ಶೈಣಿಕ ಪ್ರವಾಸ, ಶ್ರಧ್ಧಾಕೇಂದ್ರಗಳಿಗೆ ಬೇಟಿ, ತೈಪ್ತಿಕರ ವಿಶ್ರಾಂತಿ ಪಡೆಯಲು ವಿನೂತನ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದರು.
ಸ್ಮಾರಕ ದತ್ತು ಸ್ವೀಕಾರ:
ರಾಜ್ಯದ ಸಂಸತಿ ಮತ್ತು ಪರಂಪರೆಯನ್ನು ಉಳಿಸಿ, ಬೆಳೆಸಿ ಇಂದಿನ ಪೀಳಿಗೆಗೆ ರಾಜ್ಯದ ಗತವೈಭವದ, ಇತಿಹಾಸದ ದರ್ಶನ ಮಾಡಿಸುವ ನಿಟ್ಟಿನಲ್ಲಿ ಪ್ರಾಚಿನ ಸ್ಮಾರಕಗಳನ್ನು ಗುರುತಿಸಿ ಅವುಗಳನ್ನು ಸಂರಸಲು ಮತ್ತು ಜನರ ಪಾಲ್ಗೋಳ್ಳುವಿಕೆಗಾಗಿ ಸ್ಮಾರಕ ದತ್ತು ಯೋಜನೆ ರೂಪಿಸಲಾಗಿದೆ. ದೇಶ ಮತ್ತು ವಿದೇಶದಲ್ಲಿನ ಭಾರತೀಯ ಹಲವರು ಸ್ಮಾರಕ ದತ್ತು ಸ್ವೀಕಾರಕ್ಕೆ ಆಸಕ್ತಿ ತೋರಿಸಿದ್ದಾರೆ. ಪ್ರವಾಸೋದ್ಯಮದ ವೈಜ್ಞಾನಿಕ ಅಭಿವೃದ್ಧಿಗಾಗಿ ಈಗಾಗಲೇ ತರಿಂದ ವರದಿ ಪಡೆಯಲಾಗಿದೆ. ಶಿಾರಸ್ಸುಗಳನ್ನು ಅನುಷ್ಠಾನಗೊಳಿಸಲು ಕ್ರಮ ಜರುಗಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ಕನ್ನಡ ಏಕೀಕರಣ, ಕರ್ನಾಟಕ ನಾಮಕರಣಕ್ಕೆ ಸುದೀರ್ ಇತಿಹಾಸ:
ಕವಿ ಕುಮಾರವ್ಯಾಸರು 14&15ನೇ ಶತಮಾನದಲ್ಲಿಯೇ ತಮ್ಮ ಮಹಾ ಕಾವ್ಯಕ್ಕೆ ಕರ್ನಾಟಕ ಕಥಾಮಂಜರಿ ಎಂದು ಹೆಸರಿಸಿದ್ದಾರೆ. ಕನ್ನಡ ಭಾಷಿಕರ ಏಕೀಕರಣಕ್ಕೆ ಸುದೀರ್ ಇತಿಹಾಸವಿರುವಂತೆ ಕರ್ನಾಟಕ ನಾಮಕರಣಕ್ಕೆ ಭವ್ಯ ಇತಿಹಾಸವಿದೆ. ಅಂದಾನಪ್ಪ ದೊಡ್ಡಮೇಟಿ, ಹಳ್ಳಿಕೇರಿ ಗುದ್ಲೆಪ್ಪ, ಕೆ.ಎ್.ಪಾಟೀಲ, ವೀರಪ್ಪ ಬಸರೀಗಿಡದ, ಎನ್. ಎಸ್. ಸುಬ್ಬರಾಯರು, ಬೆಳ್ಳಾವೆ ವೆಂಕಟನಾರಾಯಣಪ್ಪ, ದಿವಾಕರ ರಂಗರಾಯರು, ಮುದವೀಡು ಕೃಷ್ಣರಾಯರು, ಚಂದ್ರಶೇಖರ ಶಾಸ್ತ್ರಿಗಳು, ಕೃಷ್ಣ ಶಾಸ್ತ್ರಿಗಳು, ದ. ರಾ. ಬೇಂದ್ರೆ, ಶಿ. ಶಿ. ಬಸವನಾಳರು, ಟಿ. ಪಿ. ಕೈಲಾಸಂ, ಸಿ. ಕೆ. ವೆಂಕಟರಾಮಯ್ಯ, ತಿ. ತಾ. ಶರ್ಮಾ, ಉತ್ತಂಗಿ ಚನ್ನಬಸಪ್ಪ, ಎಂ. ಆರ್. ಶ್ರೀನಿವಾಸಮೂತಿರ್, ಗೋವಿಂದಪೈ, ನಂದೀಮಠ, ಕುವೆಂಪು, ರಂ. ಶ್ರೀ. ಮುಗಳಿ, ಬಿ.ಎಂ.ಶ್ರೀ, ಅ. ನ.ಕೃ, ವಿ. ಕೆ. ಗೋಕಾಕ, ದೇ. ಜವರೇಗೌಡ ಮತ್ತಿತರ ಮಹನೀಯರು ನಾಮಕರಣದ ಸಂದರ್ಭದಲ್ಲಿ ಅಮೂಲ್ಯ ಪಾತ್ರ ನಿರ್ವಹಿಸಿದ್ದಾರೆ ಎಂದರು.