ಹಸುಗಳ ಕೆಚ್ಚಲು ಕೊಯ್ದದವರ ಸೆರೆಗೆ ಎಚ್​​ಜೆಎಸ್​​ ಆಗ್ರಹ

Vijayavani-Featured-Image
Published on

ಬೆಂಗಳೂರು: ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕೊಯ್ಯುವ ಕುಕೃತ್ಯ ಎಸಗಿರುವ ಪ್ರಕರಣದಲ್ಲಿ ಭಾಗಿಯಾಗಿರುವ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಹಿಂದೂ ಜನಜಾಗೃತಿ ಸಮಿತಿ (ಎಚ್​​ಜೆಎಸ್​​)ಸರ್ಕಾರವನ್ನು ಒತ್ತಾಯಿಸಿದೆ.

ಗೋವಿಗೆ ಭಾರತದಲ್ಲಿ ಪೂಜನೀಯ ಸ್ಥಾನ ನೀಡಲಾಗಿದೆ. ಹಿಂದು ಸಮಾಜವು ಗೋವನ್ನು ಮಾತೆಯ ರೂಪದಲ್ಲಿ ಪೂಜಿಸುತ್ತಾರೆ. ಹೀಗಿರುವಾಗ ಹಿಂದು ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರಲೆಂದೇ ಜಿಹಾದಿಗಳು ರಾತ್ರೋರಾತ್ರಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ಯುವ ಕುಕೃತ್ಯ ಎಸಗಿದ್ದಾರೆ. ಈ ಘಟನೆಯನ್ನು ಹಿಂದು ಸಮಾಜವು ಉಗ್ರವಾಗಿ ಖಂಡಿಸುತ್ತದೆ ಎಂದು ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ತಿಳಿಸಿದ್ದಾರೆ.

ತನ್ನನ್ನು ಸೆಕ್ಯುಲರ್ ಹೇಳಿಕೊಳ್ಳುವ ರಾಜ್ಯ ಕಾಂಗ್ರಸ್ ಆಡಳಿತದಲ್ಲಿ ನಿರಂತರವಾಗಿ ಹಿಂದು ಸಮಾಜದ ಮೇಲೆ ಇಂತಹ ಆಘಾತಗಳು ನಡೆಯುತ್ತಿವೆ. ಪ್ರಾಣಿಗಳ ಮೇಲೆ ಹಲ್ಲೆಯಾದಾಗಲೆಲ್ಲ ಕೂಡಲೇ ಬೊಬ್ಬೆ ಹಾಕುವ ಪ್ರಾಣಿ ದಯಾ ಸಂಘಗಳು ಕೂಡ ಈಗ ಮೌನಕ್ಕೆ ಶರಣಾಗಿವೆ. ಹಿಂದು ಸಮಾಜವು ಇನ್ನು ಇಂತಹ ದಾಳಿಗಳನ್ನು ನೋಡಿ ಸುಮ್ಮನೆ ಕೂರುವುದಿಲ್ಲ. ರಾಜ್ಯ ಸರಕಾರವು ಕೂಡಲೇ ಜಿಹಾದಿಗಳ ಬಂಧನ ಮಾಡಬೇಕು ಇಲ್ಲದಿದ್ದಲ್ಲಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net