ಮತಕ್ಷೇತ್ರದ ಅಭಿವೃದ್ಧಿಗೆ ಬದ್ಧ

Hittanalli
Published on

ಹಿಟ್ಟಿನಹಳ್ಳಿ: ಮತಕ್ಷೇತ್ರ ವ್ಯಾಪ್ತಿಯ ಎಲ್ಲ ಗ್ರಾಮಗಳ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಶ್ರಮಿಸುವೆ ಎಂದು ನಾಗಠಾಣ ಶಾಸಕ ಡಾ.ದೇವಾನಂದ ಚವಾಣ್ ಹೇಳಿದರು.

ಸಮೀಪದ ಅಂಕಲಗಿ ಹಾಗೂ ಹಿಟ್ಟಿನಹಳ್ಳಿ ಮಧ್ಯದಲ್ಲಿರುವ ಚಂದಾನಾಯಕ ಮಹಾರಾಜರ ದೇವಸ್ಥಾನ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಈ ದೇವಾಲಯ ನಿರ್ಮಾಣಕ್ಕೆ.1.10 ಕೋಟಿ ರೂ. ಅನುದಾನ ಈಗಾಗಲೇ ಮಂಜೂರಾಗಿದೆ. ಭಕ್ತರ ಅನುಕೂಲಕ್ಕಾಗಿ ಹಿಟ್ಟಿನಹಳ್ಳಿಯಿಂದ ಅಂಕಲಗಿ ಗ್ರಾಮದವರೆಗೆ 3.80 ಕೋಟಿ ರೂ.ವೆಚ್ಚದಲ್ಲಿ ದ್ವಿಪಥ ರಸ್ತೆ ಡಾಂಬರೀಕರಣ ಕಾರ್ಯವೂ ನಡೆದಿದೆ ಎಂದು ಹೇಳಿದರು.

ಚಂದ್ರಶೇಖರ ಶಿವಾಚಾರ್ಯರು ಆಶೀರ್ವಚನ ನೀಡಿದರು. ವಿ.ಟಿ.ರಾಠೋಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಗದಂಬಾ ವಿದ್ಯಾವರ್ಧಕ ಸಂಸ್ಥೆ ಅಧ್ಯಕ್ಷ ಜಿ.ಬಿ. ಅಂಗಡಿ, ರವಿಕುಮಾರ ಚವಾಣ್, ಎನ್. ಆರ್.ಅಂಗಡಿ, ತಾಪಂ ಸದಸ್ಯ ಕಲ್ಲಪ್ಪ ಇಂಡಿ, ಶರಣಗೌಡ ಪಾಟೀಲ, ಚನ್ನಪ್ಪ ದಿಂಡವಾರ, ಸಿದ್ದನಗೌಡ ಅಂಕಲಗಿ, ಬಂದಗಿಪಟೇಲ ಬಿರಾದಾರ, ಮಾನಸಿಂಗ್ ನಾಯಿಕ, ಧನಸಿಂಗ್ ಪೂಜಾರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net