

ಮಡಿಕೇರಿ:
ಮಡಿಕೇರಿಯಲ್ಲಿ ಎಲ್ಲೆಂದರಲ್ಲಿ ಅಲೆಯುತ್ತಿದ್ದ ಅಸಹಾಯಕ ವಯೋವೃದ್ದೆ ಹಾಗೂ ವಿಕಲಚೇತನ ವೃದ್ಧರೊಬ್ಬರನ್ನು ಕೊಡಗು ಹಿತರಕ್ಷಣಾ ವೇದಿಕೆ ಸದಸ್ಯರು ನಗರದ ಶಕ್ತಿ ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ.
ಹಲವು ದಿನಗಳಿಂದ ನಗರದ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣ, ಹಾವೇರಿ ಹಾಲ್, ರಸ್ತೆ ಬದಿಯ ಅಂಗಡಿ ಮಳಿಗೆಗಳ ಮಲಗುತ್ತಿದ್ದ ಇವರನ್ನು ಸಾರ್ವಜನಿಕರು ನೋಡಿ ಹಿತರಕ್ಷಣಾ ವೇದಿಕೆಯ ಸದಸ್ಯರಾದ ಆಕಾಶ್ ಮತ್ತು ಕಿರಣ್ ಗಮನಕ್ಕೆ ತಂದಿದ್ದರು. ಈ ವಿಷಯವನ್ನು ಆಕಾಶ್ ವೇದಿಕೆಯ ಅಧ್ಯಕ್ಷ ರವಿ ಗೌಡ ಅವರಿಗೆ ತಿಳಿಸಿದ ಕೂಡಲೇ ವೇದಿಕೆ ವತಿಯಿಂದ ಮಡಿಕೇರಿ ನಗರದ ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್ ಅವರಿಗೆ ತಿಳಿಸಲಾಯಿತು. ನಂತರ ಇವರನ್ನು ಶಕ್ತಿ ಆಶ್ರಮಕ್ಕೆ ಸೇರಿಸಲಾಗಿದೆ.
ಈ ಸಂದರ್ಭದಲ್ಲಿ ವೇದಿಕೆಯ ಅಧ್ಯಕ್ಷ ರವಿ ಗೌಡ, ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್, ಮಡಿಕೇರಿ ತಾಲೂಕು ಅಧ್ಯಕ್ಷ ನಾಗೇಶ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಕವಿತಾ ಪ್ರಸಾದ್, ನಿರ್ದೇಶಕರಾದ ಲಿಲ್ಲಿ. ನಗರ ಕಾರ್ಯದರ್ಶಿ ಪೂರ್ಣಿಮಾ. ಸದಸ್ಯರುಗಳಾದ ಆಕಾಶ್. ಕಿರಣ್ ಹಾಗೂ ಶಕ್ತಿ ಆಶ್ರಮದ ಮೇಲ್ವಿಚಾರಕ ಹೆಚ್. ಆರ್. ಸತೀಶ್ ಇದ್ದರು.