ಹಿಟ್ ಆ್ಯಂಡ್ ರನ್ ಶಾಸನ ರದ್ದಾಗಲಿ

8
ಕೇಂದ್ರ ಸರ್ಕಾರದ ಹಿಟ್ ಅಂಡ್ ರನ್ ಶಾಸನ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಬೈಲಹೊಂಗಲ ಚಾಲಕರು ಎಸಿ ಕಚೇರಿ ಸಿಬ್ಬಂದಿಗೆ ಮನವಿ ಸಲ್ಲಿಸಿದರು. ರಫೀಕ್ ಬಡೇಘರ್, ನಿಂಗಪ್ಪ ಪಾಟೀಲ, ಸಿದ್ದು ಕಣಬರಗಿ ಇತರರಿದ್ದರು.
Published on

ಬೈಲಹೊಂಗಲ: ಕೇಂದ್ರ ಸರ್ಕಾರದ ಹಿಟ್‌ಆ್ಯಂಡ್ ರನ್ ಶಾಸನ ಕೂಡಲೇ ರದ್ದು ಪಡಿಸುವಂತೆ ಆಗ್ರಹಿಸಿ ತಾಲೂಕು ಆಟೋ ರಿಕ್ಷಾ, ಟಾಟಾ ಎಸ್, ಗೂಡ್ಸ್ ಮತ್ತು ಪ್ಯಾಸೆಂಜರ್, ಟಂಟಂ., ಕ್ರೂಸರ್, ಕಾರ, ದ್ವಿಚಕ್ರ ವಾಹನ ಮತ್ತು ಕನ್ನಡಪರ ಹಾಗೂ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಪಟ್ಟಣದ ಬಸ್ ನಿಲ್ದಾಣದಿಂದ ಪ್ರತಿಭಟನೆ ನಡೆಸಿ ಗುರುವಾರ ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಅರ್ಪಿಸಲಾಯಿತು.

ಆಟೋ ರಿಕ್ಷಾ ಚಾಲಕರ ಸಂಘದ ತಾಲೂಕು ಅಧ್ಯಕ್ಷ ರಫೀಕ್ ಬಡೇಘರ್ ಮಾತನಾಡಿ, ಹಿಟ್ ಅಂಡ್ ರನ್ ಪ್ರಕರಣ ವಿಷಯದಲ್ಲಿ ರೂಪಿಸಿರುವ ಶಾಸನ ಚಾಲಕರಿಗೆ ಮಾರಕವಾಗಿದೆ. ಕೂಡಲೇ ಕಾಯ್ದೆಯನ್ನು ಹಿಂಪಡೆಯದಿದ್ದರೆ ಬೈಲಹೊಂಗಲ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದರು.
ಟಾಟಾ ಎಸ್ ಚಾಲಕರ ಸಂಘದ ಅಧ್ಯಕ್ಷ ನಿಂಗಪ್ಪ ಪಾಟೀಲ, ಉಪಾಧ್ಯಕ್ಷ ಸಿದ್ದು ಕಣಬರಗಿ ಮಾತನಾಡಿ, ಹಿಟ್ ಆ್ಯಂಡ್ ಪ್ರಕರಣದಲ್ಲಿ ಚಾಲಕರಿಗೆ ಮಾರಕವಾಗುವ ಕುರಿತ ಕೂಡಲೇ ಕಾಯ್ದೆಯಲ್ಲಿರುವ ಅಂಶಗಳನ್ನು ತೆಗೆದುಹಾಕಬೇಕು ಒತ್ತಾಯಿಸಿದರು.

ಚಾಲಕರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಅಕ್ರೋಶ ಹೊರಹಾಕಿದರು. ಕರುನಾಡು ವಿಜಯ ಸೇನೆ ತಾಲೂಕಾಧ್ಯಕ್ಷ ವಿಠ್ಠಲ ಕಡಕೋಳ, ಆನಂದ ಯರಗಟ್ಟಿ, ಚಾಲಕರಾದ ಮಹೆತಾಬ್ ಖುದ್ದುನವರ್, ಉಳವಪ್ಪ ಅಂಗಡಿ, ಅಶೋಕ ಮುದಕನಗೌಡರ, ಈರಣ್ಣ ಉಪ್ಪಿನ, ದಿಲಾವರ ಹವಾಲ್ದಾರ, ಶಕೀಲ್ ಫೀರಜಾದೆ, ದಾದಾಪೀರ್ ಸಂಗೊಳ್ಳಿ, ಶಬ್ಬೀರ್ ಮುಲ್ಲಾ, ಗಂಗಪ್ಪ ಸಂಗೊಳ್ಳಿ, ಧರ್ಮರಾಜ ನೀಲನ್ನವರ, ಶಬ್ಬೀರ್ ನದ್ಾ, ಾರೂಕ್ ಮುಲ್ಲಾ, ಆನಂದ ಅಂಗಡಿ, ವಿಜಯ ಕಗ್ಗೋಡೆ, ರಾಘು ದಾನನ್ನವರ, ಬಾಬು ಕರೋಶಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net