ಹಿಟ್ ಆ್ಯಂಡ್ ರನ್ ಲಾರಿ, ಚಾಲಕ ವಶಕ್ಕೆ

WhatsApp Image 2025-03-17 at 4.56.47 PM
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಲಾರಿ ಹಾಗೂ ಚಾಲಕನನ್ನು ಸಂಚಾರಿ ಠಾಣೆ ಪೊಲೀಸರು ಸಿನಿಮೀಯ ರೀತಿಯಲ್ಲಿ ಚೇಸ್ ಮಾಡಿ ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇಲ್ಲಿನ ಬೈಪಾಸ್‌ನ ಹೊಯ್ಸಳನಗರ ಬಳಿ ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಲಾರಿ ಮತ್ತು ದ್ವಿಚಕ್ರ ವಾಹನದ ಮಧ್ಯೆ ಅಪಘಾತ ಸಂಭವಿಸಿತ್ತು. ಬೈಕ್‌ನಲ್ಲಿದ್ದ ಇಲ್ಲಿನ ಕುಮಾರೇಶ್ವರನಗರದ ಗ್ಯಾನಬಾ ಲೇಔಟ್ ನಿವಾಸಿ ಡಾ. ಸುಭಾಸಚಂದ್ರ ಕೋರೆ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಅಪಘಾತ ಸಂಭವಿಸಿದರೂ ಸ್ಥಳದಲ್ಲಿ ನಿಲ್ಲದ ಚಾಲಕ ಲಾರಿ ಸಮೇತ ಪರಾರಿಯಾಗಿದ್ದ. ಮಾಹಿತಿ ತಿಳಿದ ಸಂಚಾರಿ ಠಾಣೆ ಇನ್ಸ್ಪೆಕ್ಟರ್ ಶ್ರೀನಿವಾಸ ಮೇಟಿ ಹಾಗೂ ತಂಡ ಲಾರಿಯನ್ನು ಬೆನ್ನಟ್ಟಿತ್ತು. ಕಲ್ಲಂಗಡಿ ಹಣ್ಣು ಸಾಗಿಸುತ್ತಿದ್ದ ಕೇರಳದ ಲಾರಿಯನ್ನು ತಾಲೂಕಿನ ವೆಂಕಟಾಪುರ ಬಳಿ ಚೇಸ್ ಮಾಡಿ ಚಾಲಕ ನೌಶಾದ್‌ಕಂಗಲ್ ಎಂಬಾತನ ಸಮೇತ ವಶಕ್ಕೆ ಪಡೆದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net