ಅಧ್ಯಯನ ಭಾಷೆಯಾದ ಜನಪದ

16635030350966
Published on

ಚಿತ್ರದುರ್ಗ: ಜನಪದ ಗ್ರಾಮೀಣ ಭಾಗದ ಅಶಿಕ್ಷಿತರಿಂದ ಸೃಷ್ಟಿಯಾಗಿದೆ ಎಂಬ ನಿಲುವು ಬದಲಾಗಿದ್ದು, ಈಗ ಲಿಖಿತ ಅಧ್ಯಯನ ವಿಷಯವಾಗಿದೆ ಎಂದು ಹಿರಿಯ ವಿದ್ವಾಂಸ ತುಮಕೂರಿನ ಡಾ.ಎಸ್.ಪಿ.ಪದ್ಮಪ್ರಸಾದ್ ಹೇಳಿದರು.

ಐಎಂಎ ಸಭಾಂಗಣದಲ್ಲಿ ಭಾನುವಾರ ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ ಸಂಸ್ಕೃತಿ ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನದಿಂದ ನಡೆದ 46ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಾಹಿತ್ಯ ರಚನೆಗೆ ಬೇಡದಿರುವ ವಿಷಯಗಳಿಲ್ಲ. ಆದ್ದರಿಂದ ಕವಿ ಮತ್ತು ಲೇಖಕನಿಗೆ ಎಲ್ಲಾ ವಿಷಯಗಳ ಜ್ಞಾನವಿರಬೇಕು. ಬಳಸುವ ಭಾಷೆಯ ಕಲಾತ್ಮಕತೆ ಸಾಹಿತ್ಯವನ್ನು ಸುಂದರವಾಗಿಸುತ್ತದೆ ಎಂದ ಅವರು, ತಮಿಳುನಾಡು ಬಿಟ್ಟರೆ ಅತಿ ಹೆಚ್ಚು ಶಾಸನಗಳು ಸಿಗುವುದು ಕರ್ನಾಟಕದಲ್ಲಿ ಎಂದರು.

ಇತಿಹಾಸ ಕೂಟದ ಸಂಚಾಲಕ ಡಾ.ಎನ್.ಎಸ್.ಮಹಂತೇಶ್ ಮಾತನಾಡಿದರು. ನಿರ್ದೇಶಕ ಡಾ.ಲಕ್ಷ್ಮಣತೆಲಗಾವಿ, ದೊಡ್ಡಪ್ಪ, ಬಸವರಾಜ್ ಟಿ.ಬೆಳಗಟ್ಟ, ಸುರೇಶ್ ಭಂಡಾರಿ, ವೆಂಕಟೇಶ್, ಓಬಯ್ಯ, ಡಾ.ಲತಾ, ಡಾ.ತಿಪ್ಪೇಸ್ವಾಮಿ, ಬೊಮ್ಮಣ್ಣ, ಪೂಜಾರ್, ಹಿಂದುಶೇಖರ್, ದೇವೇಂದ್ರಪ್ಪ, ಡಿ.ಗೋಪಾಲಸ್ವಾಮಿ ನಾಯಕ, ಡಾ.ವಿರುಪಾಕ್ಷಿ ಪೂಜಾರಹಳ್ಳಿ, ಬೋರಯ್ಯ, ರುದ್ರಮುನಿ, ರೇಣುಕಾ ಪ್ರಕಾಶನದ ಗೌರವಾಧ್ಯಕ್ಷೆ ವೈ.ಗುಣವತಿ ಮಹಂತೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net