ಸ್ವರ್ಣಾ ನದಿಯಲ್ಲಿ ಪಂಚಲೋಹದ ವಿಗ್ರಹ ಪತ್ತೆ

krishna vigraha
Published on

ಉಡುಪಿ: ಬೆಳ್ಳಂಪಳ್ಳಿ ಸ್ವರ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಕೆಳಗೆ ಆ.31ರಂದು ರಾತ್ರಿ ಕೃಷ್ಣನ ಪಂಚಲೋಹದ ವಿಗ್ರಹ ಪತ್ತೆಯಾಗಿದೆ.

ರಾತ್ರಿ 8 ಗಂಟೆ ಹೊತ್ತಿಗೆ ಮೀನಿಗಾಗಿ ಗಾಳ ಹಾಕುತ್ತಿದ್ದ ಸ್ಥಳೀಯ ಮೀನುಗಾರರಾದ ಪುರಂದರ ಕೋಟ್ಯಾನ್, ರಾಕೇಶ್, ನಿಶಾನ್, ರಿತಿಕ್, ನವೀನ್, ಆತ್ರಾಡಿ ದಿನೇಶ್ ಪೂಜಾರಿ ಅವರಿಗೆ ಹೊಳೆಯುತ್ತಿರುವ ವಸ್ತು ಕಂಡುಬಂತು.

ವಿಗ್ರಹವನ್ನು ಮೇಲೆತ್ತಿ ಗಮನಿಸಿದಾಗ ಕೊಳಲೂದುವ ಗೋಪಾಲಕೃಷ್ಣನ ಆಕೃತಿಯ ಪಂಚಲೋಹ ವಿಗ್ರಹವಾಗಿತ್ತು. ವಿಗ್ರಹ 8 ಕೆ.ಜಿ.ತೂಕವಿದೆ.

ಮೀನುಗಾರರು ಸ್ಥಳೀಯರಾದ ಬೆಳ್ಳಂಪಳ್ಳಿ ಭೂತರಾಜ ಸನ್ನಿಧಿಯ ಅಧ್ಯಕ್ಷ ಪ್ರವೀಣ್ ಶೆಟ್ಟಿ ಅವರಿಗೆ ವಿಚಾರ ತಿಳಿಸಿದ್ದು, ವಿಗ್ರಹವನ್ನು ಹಿರಿಯಡ್ಕ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net