ಸಮಾಜದ ಅಭಿವೃದ್ಧಿಗೆ ಶ್ರೀಗಳ ಕೊಡುಗೆ ಅಪಾರ

His contribution to the development of society is immense.
ಶ್ರೀ ಕಲ್ಮಠದಲ್ಲಿ ಬುಧವಾರ ‘ನಮ್ಮೂರು ಉತ್ಸವ. ಕಾರ್ಯಕ್ರಮವನ್ನು ಶ್ರೀಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮೀಜಿ ನೇತತ್ವದಲ್ಲಿ ಎಸ್‌ಎಲ್ ಓ ಉದಯ ಕುಂಬಾರ ಉದ್ಘಾಟಿಸಿದರು. ರುದ್ರಮುನಿ ಶ್ರೀಗಳು, ಗುರುಪಾದ ಶ್ರೀಗಳು, ತಹಸೀಲ್ದಾರ ವಿನೊದ ಹತ್ತಳ್ಳಿ ಇತರರಿದ್ದರು.
Published on

ಬೀಳಗಿ: ಕಲ್ಮಠದ ಮಠದ ಭವ್ಯ ಪರಂಪರೆ ಉಳಿಸುವುದರ ಜತೆಗೆ ಸಮಾಜದ ಏಳಿಗೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಶ್ರೀ ಗುರುಪಾದ ಸ್ವಾಮೀಜಿಯವರ ಧಾರ್ಮಿಕ ಚಿಂತನೆಗಳು ಭಕ್ತರಿಗೆ ಅಭಿಮಾನದ ಸಂಗತಿಯಾಗಿದೆ ಎಂದು ಬೀಳಗಿ ಕ.ಮೇ.ಯೋ ವಿಶೇಷ ಭೂಸ್ವಾಧಿನಾಧಿಕಾರಿ ಉದಯ ಕುಂಬಾರ ಹೇಳಿದರು.

ಶ್ರೀ ಕಲ್ಮಠದ ಲಿಂ, ಗುರುಪಾದ ಶಿವಾಚಾರ್ಯ ಮಹಾಸ್ವಾಮಿಗಳವರ 53ನೇ ಪುಣ್ಯ ಸ್ಮರಣೋತ್ಸವದ ಅಂಗವಾಗಿ ಡಿ. 14 ರವರೆಗೆ ನಡೆಯಲಿರುವ ‘ನಮ್ಮೂರು ಉತ್ಸವ’ ಕಾರ್ಯಕ್ರವನ್ನು ಶ್ರೀ ಕಲ್ಮಠದಲ್ಲಿ ಬುಧವಾರ ಉದ್ಘಾಟಿಸಿ ಮಾತನಾಡಿದ ಅವರು, ಸದ್ಗುಣಗಳ ದೀಕ್ಷೆ, ದುಶ್ಚಟಗಳ ಜನಜಾಗತಿ ಪಾದಯಾತ್ರೆಗಳಂತಹ ಅನೇಕ ಜನಪರ ಕಾರ್ಯದಿಂದ ಶ್ರೀಗಳು ಮನೆ-ಮನದ ಗುರುಗಳಾಗಿದ್ದಾರೆ. ಪ್ರತಿ ಸೋಮವಾರ ಆಧ್ಯಾತ್ಮಿಕ ಪ್ರವಚನ ಆಯೋಜಿಸಿ ಭಕ್ತರ ಮನಗಳಲ್ಲಿ ಜ್ಯೋತಿಯನ್ನು ಬೆಳಗಿಸುತ್ತಿದ್ದಾರೆ. ಭಕ್ತರ ಕಲ್ಯಾಣಕ್ಕೆ ಮಾರ್ಗದರ್ಶನ ಮಾಡುತ್ತಿರುವ ಶ್ರೀಗಳ ಕೊಡುಗೆ ಅಪಾರ ಎಂದರು.

ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಸಾನಿಧ್ಯವಹಿಸಿ ಮಾತನಾಡಿ, ‘ಮಠದಿಂದ ಘಟ ಬೆಳಗಬಾರದು. ಘಟದಿಂದ ಮಠಗಳು ಬೆಳಗಬೇಕು’ ಎಂಬ ನುಡಿಯನ್ನು ಮನದಲ್ಲಿ ಇಟ್ಟುಕೊಂಡಿರುವ ಗುರುಪಾದ ಶ್ರೀಗಳು ಅನೇಕ ಧಾರ್ಮಿಕ ಕಾರ್ಯ ನಡೆಸುತ್ತಿದ್ದಾರೆ. ಒಳ್ಳೆಯ ಆಚಾರ ವಿಚಾರಗಳು ಇದ್ದರೆ ಮಾತ್ರ ಸೇವಾ ಮನೋಭಾವ ಇರಲು ಸಾಧ್ಯ. ನೊಂದವರಿಗೆ ಸಹಾಯ ಮಾಡಿದರೆ ಮಾತ್ರ ಜೀವನ ಸಾರ್ಥಕತೆ ಪಡೆದುಕೊಳ್ಳುತ್ತದೆ ಎಂದರು.

ತಹಸೀಲ್ದಾರ ವಿನೋದ ಹತ್ತಳ್ಳಿ ಮಾತನಾಡಿ, ಸಾಮಾಜಿಕ ವ್ಯವಸ್ಥೆಯಲ್ಲಿ ಮಠ-ಮಾನ್ಯಗಳು ಮನುಷ್ಯನಿಗೆ ಒಳ್ಳೆಯ ಮಾರ್ಗದರ್ಶನ ನೀಡುವ ಕಾರ್ಯ ಮಾಡುತ್ತಿವೆ ಎಂದರು. ಕುಂದರಗಿ ಜಮ್ ಶುಗರ್ಸ್‌ ನಿರ್ದೇಶಕ ರಾಮನಗೌಡ ಜಕ್ಕನಗೌಡ ಅಧ್ಯಕ್ಷತೆವಹಿಸಿ ಮಾತನಾಡಿದರು.

ಶ್ರೀ ಕಲ್ಮಠದ ಗುರುಪಾದ ಶಿವಾಚಾರ್ಯ ಮಹಾಸ್ವಾಮೀಜಿಯವರು, ಚನ್ನಬಸವ ಮಹಾಸ್ವಾಮಿಗಳು, ಕುಂದರಗಿ ವೀರಸಂಗಮೇಶ್ವರ ಶ್ರೀಗಳು, ಶೇಷಪ್ಪಯ್ಯ ಸ್ವಾಮಿಗಳು, ಬ್ರಹನ್ಮಠ ಶಿವಾನಂದ ದೇವರು, ಸಿದ್ದಯ್ಯ ಸ್ವಾಮಿ, ಸದಾನಂದ ಶಾಸಿ, ಅ.ಭಾ,ಸಾ. ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಜತ್ತಿ, ವೀರಭದ್ರಪ್ಪ ನಾಗರಾಳ, ನಿಂಗಯ್ಯಸ್ವಾಮಿ ಎಂ. ಗುಂಡಗುರ್ತಿ, ಗಾಯಕ ಅಡವೀಶಕುಮಾರ ಪಿ. ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net