ಹಿರಿಯೂರಲ್ಲಿ ಪಿಯುಸಿ ಪರೀಕ್ಷೆ ಸುಗಮ

HYR PUC 04
Published on

ಹಿರಿಯೂರು: ತಾಲೂಕಿನ ಮೂರು ಕೇಂದ್ರಗಳಲ್ಲಿ ಮೊದಲ ದಿನವಾದ ಬುಧವಾರ ದ್ವಿತೀಯ ಪಿಯುಸಿ ಇತಿಹಾಸ ಹಾಗೂ ಭೌತಶಾಸ್ತ್ರ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ನಗರದ ಗಿರೀಶ ಬಾಲಕಿಯರ ಪದವಿ ಪೂರ್ವ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ತಾಲೂಕಿನ ಹರಿಯಬ್ಬೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷೆ ನಡೆಯಿತು.

ಗಿರೀಶ ಬಾಲಕಿಯರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಎರಡು ಬ್ಲಾಕ್‌ಗಳಿದ್ದರಿಂದ ವಿದ್ಯಾರ್ಥಿಗಳು ನೋಂದಣಿ ಸಂಖ್ಯೆ ಹಾಗೂ ಹಾಗೂ ಕೊಠಡಿ ಸಂಖ್ಯೆ ಹುಡುಕಾಡಲು ತೊಂದರೆಯಾಗಿತ್ತು.

ಮೂರು ಪರೀಕ್ಷಾ ಕೇಂದ್ರಕ್ಕೂ ಸಿ.ಸಿ. ಕ್ಯಾಮರಾ ಅಳವಡಿಕೆ, ಸುತ್ತಲೂ ಪೊಲೀಸ್ ಬಿಗಿಬಂದೋಬಸ್ ಏರ್ಪಡಿಸಲಾಗಿತ್ತು. ಎಲ್ಲೂ ನಕಲು, ಡಿಬಾರ್ ಪ್ರಕರಣ ಕಂಡುಬಂದಿಲ್ಲ.

ಪರೀಕ್ಷೆ ಆರಂಭದ ದಿನವಾದ್ದರಿಂದ ಪರೀಕ್ಷಾ ಕೇಂದ್ರಕ್ಕೆ ಪಾಲಕರೇ ಖುದ್ದು ಬಂದು ಮಕ್ಕಳಿಗೆ ಕೊಠಡಿ-ನೋಂದಣಿ ಸಂಖ್ಯೆ ಹುಡುಕಿಕೊಡುವ ಮೂಲಕ ಆತ್ಮಸ್ಥೈರ್ಯ ತುಂಬುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net