ಮೋದಿ ಆಡಳಿತವೇ ಬಿಜೆಪಿಗೆ ಶ್ರೀರಕ್ಷೆ

HYR Eshwarappa 12
Published on

ಹಿರಿಯೂರು: ಪ್ರಧಾನಿ ನರೇಂದ್ರ ಮೋದಿ ಅವರ ಜನಪರ, ದಕ್ಷ, ಪಾರದರ್ಶಕ ಆಡಳಿತವೇ ಬಿಜೆಪಿಗೆ ಶ್ರೀರಕ್ಷೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಶಾಸಕಿ ಕೆ.ಪೂರ್ಣಿಮಾ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿ, ಲಾಕ್‌ಡೌನ್ ಪರಿಸ್ಥಿತಿಯನ್ನು ಕೇಂದ್ರ- ರಾಜ್ಯ ಸರ್ಕಾರಗಳೆರೆಡೂ ಸಮರ್ಥವಾಗಿ ನಿಭಾಯಿಸಿವೆ ಎಂದರು.

ದೇಶವನ್ನು ಅಭವೃದ್ಧಿ ಪಥದಲ್ಲಿ ಮುನ್ನಡೆಸಲು ಲಾಕ್‌ಡೌನ್ ಸಂಕಷ್ಟಕ್ಕೀಡಾದವರಿಗೆ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿದೆ ಎಂದು ತಿಳಿಸಿದರು.

ಹಿರಿಯೂರಿನ ಗ್ರಾಮೀಣಾಭಿವೃದ್ಧಿಗೆ ವಿಶೇಷ ಅನುದಾನ ಕೋರಿ ಶಾಸಕಿ ಕೆ.ಪೂರ್ಣಿಮಾ ಇದೇ ವೇಳೆ ಮನವಿ ಸಲ್ಲಿಸಿದರು. ಸಂಸದ ಎ.ನಾರಾಯಣಸ್ವಾಮಿ, ನಗರಸಭೆ ಮಾಜಿ ಅಧ್ಯಕ್ಷ ಟಿ.ಚಂದ್ರಶೇಖರ್, ಸದಸ್ಯ ಮಹೇಶ್ ಪಲ್ಲವ, ಚಿರಂಜೀವಿ, ರಾಘವೇಂದ್ರ, ನಿರಂಜನಮೂರ್ತಿ, ಕಬಡ್ಡಿ ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net