ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾ

HYR cpi 16
Published on

ಹಿರಿಯೂರು: ಬಡವರ ವಸತಿ ಹಕ್ಕಿಗಾಗಿ ಬಳ್ಳಾರಿಯಿಂದ ಆರಂಭವಾಗಿರುವ ಸೂರಿಗಾಗಿ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾ ಸೋಮವಾರ ನಗರಕ್ಕೆ ಆಗಮಿಸಿತು. ಗಾಂಧಿ ವೃತ್ತದಲ್ಲಿ ಜಾಥಾಕ್ಕೆ ಸಿಪಿಐ ಕಾರ್ಯಕರ್ತರು ಸ್ವಾಗತ ಕೋರಿ, ಬೆಂಬಲ ಸೂಚಿಸಿದರು.

ಮುಖಂಡ ಎಸ್.ಸಿ.ಕುಮಾರ್ ಮಾತನಾಡಿ, ಸೂರಿಲ್ಲದ ಕುಟುಂಬಗಳಿಗೆ ಸೂರು ಕಲ್ಪಿಸುವುದು ಕೇಂದ್ರ-ರಾಜ್ಯ ಸರ್ಕಾರದ ಜವಾಬ್ದಾರಿ. ಆದರೆ ಸರ್ಕಾರಗಳಿಂದ ಈ ಕಾರ್ಯವಾಗುತ್ತಿಲ್ಲ ಎಂದು ದೂರಿದರು.

ನೂರಾರು ಸಿಪಿಐ ಕಾರ್ಯಕರ್ತರು ಕಾಲ್ನಡಿಗೆ ಜಾಥಾಕ್ಕೆ ಸಾತ್ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net