ವಿವಿ ಪುರ ಗ್ರಾಪಂ ಹಳ್ಳಿಗಳನ್ನು ಸೇರಿಸಿ

UMESH A
Published on

ಹಿರಿಯೂರು: ದೀಪದ ಕೆಳಗೆ ಕತ್ತಲು ಎಂಬಂತೆ ವಿವಿ ಸಾಗರ ಜಲಾಶಯದಿಂದ ಕೇವಲ ಅರ್ಧ ಕಿಮೀ ದೂರ ಇರುವ ವಿ.ವಿ.ಪುರ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಿಗೆ ಕುಡಿವ ನೀರು ಸೌಲಭ್ಯ ಇಲ್ಲ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎ.ಉಮೇಶ್ ತಿಳಿಸಿದ್ದಾರೆ.

ಜಲಾಶಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ ಇಲ್ಲಿನ ಜನರಿಗೆ ಕುಡಿವ ನೀರು ಪೂರೈಕೆ ಇಲ್ಲದಿರುವುದು ನೋವಿನ ವಿಷಯ. ಕೂಡಲೇ ಬಹುಗ್ರಾಮ ಕುಡಿವ ನೀರಿನ ಯೋಜನೆ ವ್ಯಾಪ್ತಿಗೆ ಈ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಸೇರಿಸಬೇಕು ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net