ಅಡುಗೇಲಿ ಶುಚಿತ್ವ, ಸುರಕ್ಷತೆ ಇರಲಿ

HYR akshara 07
Published on

ಹಿರಿಯೂರು: ಬಿಸಿಯೂಟ ಮತ್ತು ಕ್ಷೀರಬಾಗ್ಯ ಯೋಜನೆ ಮಕ್ಕಳಿಗೆ ತಲುಪುವಲ್ಲಿ ಅಡುಗೆ ಸಿಬ್ಬಂದಿ ಪಾತ್ರವೇ ಮುಖ್ಯ ಎಂದು ತಾಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಲ್.ನಾಗರಾಜಾಚಾರಿ ತಿಳಿಸಿದರು.

ತಾಪಂ ಅಕ್ಷರ ದಾಸೋಹ ವಿಭಾಗ ಸಹಯೋಗದಲ್ಲಿ ತಾಲೂಕಿನ ಧರ್ಮಪುರದ ಪಂಚಲಿಂಗೇಶ್ವರ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಹೋಬಳಿ ಮಟ್ಟದ ಮುಖ್ಯ ಅಡುಗೆ, ಸಹಾಯಕ ಸಿಬ್ಬಂದಿ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಅಡುಗೆ ತಯಾರಿಸುವ ಸಂದರ್ಭದಲ್ಲಿ ಸುರಕ್ಷತೆ, ಶುಚಿತ್ವ ಕಾಪಾಡಿಕೊಳ್ಳಬೇಕು. ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಬೇಕು ಎಂದರು.

ಸಿಲೆಂಡರ್ ಬಳಸುವ ಸಂದರ್ಭದಲ್ಲಿ ಆಗುವ ಅನಾಹುತ ಮತ್ತು ಸುರಕ್ಷಿತ ಹಾಗೂ ಮಿತವ್ಯಯ ಬಳಕೆಯ ಬಗ್ಗೆ ಪ್ರಾತ್ಯಕ್ಷಿಕೆಯನ್ನು ಅಗ್ನಿಶಾಮಕ ದಳದ ಸಂತೋಷ್ ಹಾಗೂ ಯೋಗೇಶ್ ತೋರಿಸಿದರು.

ಪ್ರಾಂಶುಪಾಲ ಡಾ.ವಿ.ವೀರಣ್ಣ, ಕ್ಷೇತ್ರ ಸಮನ್ವಯಾಧಿಕಾರಿ ಇ.ತಿಪ್ಪೇರುದ್ರಪ್ಪ, ಧರ್ಮಪುರ ಗ್ರಾಪಂ ಅಧ್ಯಕ್ಷೆ ಇಂದ್ರಮ್ಮ, ಇಸಿಒ ಲೋಹಿತ್, ಹರೀಶ್, ಸಿಆರ್‌ಪಿ ನರಸಿಂಹಮೂರ್ತಿ, ಯತೀಶ್, ಚಿಕ್ಕಪ್ಪ, ಶಿವಕುಮಾರ್, ಚಂದ್ರಶೇಖರ್, ಮಂಜುನಾಥ್, ಪಿಡಿಒ ಚಿಕ್ಕಣ್ಣ, ಚಂದ್ರಣ್ಣ, ಬಾಬು, ಶೇಖರ್, ನಿಂಗಮ್ಮ, ರಾಜೇಶ್ವರಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net