ಮೈತ್ರಿ ಸರ್ಕಾರದಲ್ಲಿ ಹೆಚ್ಚು ಅನುದಾನ

HYR knd 01
Published on

ಹಿರಿಯೂರು: ಮೈತ್ರಿ ಸರ್ಕಾರದ ಅವಧಿಯಲ್ಲಿ ತಾಲೂಕಿನ ಅಭಿವೃದ್ಧಿಗೆ ಹೆಚ್ಚು ಅನುದಾನ ಬಿಡುಗಡೆ ಆಗಿತ್ತು ಎಂದು ಜಿಪಂ ಸದಸ್ಯೆ ತ್ರಿವೇಣಿ ಶಿವಪ್ರಸಾದ್ ಗೌಡ ಹೇಳಿದರು.

ಖಂಡೇನಹಳ್ಳಿಯಲ್ಲಿ 15ಲಕ್ಷ ರೂ. ವೆಚ್ಚದಲ್ಲಿ ಹೈಟೆಕ್ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ವೇದಾವತಿ ನದಿ ಪಾತ್ರದಲ್ಲಿ ಸರಣಿ ಚೆಕ್ ಡ್ಯಾಂ,ಗ್ರಾಮೀಣ ರಸ್ತೆ, ಕುಡಿವ ನೀರಿಗೆ ಅನುದಾನ ನೀಡಲಾಗಿದ್ದು ಜಿಪಂ ಅನುದಾನ ಬಳಸಿಕೊಂಡು ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ಸುನೀತಾ ಮಂಜುನಾಥ್, ಮಾಜಿ ಅಧ್ಯಕ್ಷ ಕೆ.ಜಿ.ತಿಮ್ಮರಾಯಪ್ಪ, ಕಾಂಗ್ರೆಸ್ ಮುಖಂಡ ಈಶ್ವರಪ್ಪ, ಸೈಯದ್ ಲಾಲಾ ಸಾಬ್, ಡಿ.ನರಸಿಂಹಮೂರ್ತಿ, ರಘುವೀರ್, ಹನುಮಂತರಾಯ, ದಾದಾಪೀರ್, ಜೆಡಿಎಸ್ ತಾಲೂಕಾಧ್ಯಕ್ಷ ಜಿ.ಎಸ್.ಶಿವಪ್ರಸಾದ್, ತಾಪಂ ಸದಸ್ಯೆ ಜಿ.ಕಲ್ಪನಾ ಶಿವಣ್ಣ, ಮಾಜಿ ಸದಸ್ಯ ಕೆ.ಎಸ್.ವೀರಣ್ಣ, ನಾಗರಾಜ್ ಶಾಸ್ತ್ರಿ, ಹೊಸಕೆರೆ ರಘುನಾಥ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net