ಲ್ಯಾಪ್‌ಟಾಪ್ ವಿತರಿಸಲು ಪಟ್ಟು

HYR studenet protest 16
Published on

ಹಿರಿಯೂರು: ಪದವಿ ವ್ಯಾಸಂಗ ನಿರತ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್ ಟಾಪ್ ವಿತರಿಸಲು ಆಗ್ರಹಿಸಿ ಸರ್ಕಾರಿ ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು.

ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಮಾತ್ರ ಉಚಿತ ಲ್ಯಾಪ್‌ಟಾಪ್ ನೀಡುವ ಕ್ರಮ ಸರಿಯಲ್ಲ. ಈ ತಾರತಮ್ಯ ಕೈಬಿಟ್ಟು ಪದವಿ ಓದುತ್ತಿರುವ ಎಲ್ಲ ವಿದ್ಯಾರ್ಥಿಗಳಿಗೆ ವಿತರಿಸುವಂತೆ ಒತ್ತಾಯಿಸಿದರು.

ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿ ಗ್ರೇಡ್ 2 ತಹಸೀಲ್ದಾರ್ ಚಂದ್ರಕುಮಾರ್‌ಗೆ ಮನವಿ ಸಲ್ಲಿಸಿದರು.

ವಿದ್ಯಾರ್ಥಿಗಳಾದ ಕಾವ್ಯಾ, ಮಂಜುಳಾ, ಹರ್ಷಿತಾ, ಗಾಯತ್ರಿ, ಮಮತಾ, ರೂಪಾ, ಶಿಲ್ಪಾ, ಭಾಗ್ಯಾ, ರತ್ನಾ, ಮಂಜುನಾಥ, ರಂಗಸ್ವಾಮಿ, ಷರೀಫ್, ಅಬ್ದುಲ್, ಮನೋಜ್, ಪ್ರಕಾಶ್, ತಿಪ್ಪೇಸ್ವಾಮಿ, ಮಹೇಶ್, ರಮೇಶ್ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net