ಕರ್ತವ್ಯದಲ್ಲಿ ಇರಲಿ ಪ್ರಾಮಾಣಿಕತೆ

VV PURA 09 (1)
Published on

ಹಿರಿಯೂರು: ಸರ್ಕಾರಿ ನೌಕರರು ಕರ್ತವ್ಯದಲ್ಲಿ ಬದ್ಧತೆ ಪ್ರದರ್ಶಿಸಬೇಕು. ಈ ಮೂಲಕ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕಾರ್ಯನಿರ್ವಹಿಸಬೇಕು ಎಂದು ಪತ್ರಾಂಕಿತ ವ್ಯವಸ್ಥಾಪಕ ಸುರೇಂದ್ರಾಚಾರ್ ಹೇಳಿದರು.

ವಾಣಿ ವಿಲಾಸಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಶಿಕ್ಷಣ ಇಲಾಖೆ ಲಿಪಿಕ, ವಾಹನ ಚಾಲಕರು ಮತ್ತು ಡಿ ದರ್ಜೆ ನೌಕರರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಚೇರಿಗೆ ನಿಗದಿತ ಸಮಯಕ್ಕೆ ಹಾಜರಾಗಬೇಕು. ಮೇಲಧಿಕಾರಿಗಳ ಸೂಚನೆಯನ್ನು ತಪ್ಪದೇ ಪಾಲಿಸಬೇಕು. ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕರ್ತವ್ಯ ನಿರ್ವಹಿಸಬೇಕು. ಇದರಿಂದ ಸರ್ಕಾರಿ ನೌಕರರ ಮೇಲೆ ಜನರ ನಂಬಿಕೆ ಹೆಚ್ಚಲಿದೆ ಎಂದರು.

ಕಾರ್ಯದರ್ಶಿ ಕರಿಯಣ್ಣ ಮಾತನಾಡಿ, ಕಚೇರಿ ಅಥವಾ ಶಾಲೆಗಳಲ್ಲಿ ಯಾರಿಂದಾದರೂ ಕಿರುಕುಳ ಅಥವಾ ಸಮಸ್ಯೆಗಳಿದ್ದಲ್ಲಿ ಸಂಘದ ಗಮನಕ್ಕೆ ತಂದರೆ ಚರ್ಚೆ ಮೂಲಕ ಸರಿಪಡಿಸುವುದಾಗಿ ತಿಳಿಸಿದರು.

ಉಪಾಧ್ಯಕ್ಷ ಶಿವಪ್ರಸಾದ್, ಸಂಘಟನಾ ಕಾರ್ಯದರ್ಶಿ ಎಂ.ತಿಪ್ಪೇಸ್ವಾಮಿ, ಖಚಾಂಚಿ ರೂಪಾ, ಪದಾಧಿಕಾರಿಗಳಾದ ತಾಜ್‌ಪೀರ್, ಪಲ್ಲವಿ, ಮಮತಾ ರಾಣಿ, ಶಿಲ್ಪಾ, ಆಯಿಷಾ, ಲತಾ, ಶಿವಕುಮಾರ್, ಸತ್ಯನಾರಾಯಣ, ಮುರುಗೇಶ್, ಹೇಮರಾಜು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net