

ಹಿರಿಯೂರು: ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮತ್ತು ಸ್ವಾರ್ಥ ಸಾಧನೆಗಾಗಿ ಗೊಲ್ಲ ಸಮುದಾಯದಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿರುವುದು ಖಂಡನೀಯ ಎಂದು ತಾಲೂಕು ಗೊಲ್ಲ ಸಂಘದ ಅಧ್ಯಕ್ಷ ಆರ್.ರಂಗಸ್ವಾಮಿ ಹೇಳಿದರು.
ನಗರದ ಶ್ರೀಕೃಷ್ಣ ದೇಗುಲದ ಆವರಣದಲ್ಲಿ ಭಾನುವಾರ ನಡೆದ ಯಾದವ ಮುಖಂಡರ ಸಭೆಯಲ್ಲಿ ಮಾತನಾಡಿ, ಯಾದವ ಸಮುದಾಯದ ಏಕೈಕ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ವಿರುದ್ಧ ರಾಜಕೀಯ ಕಾರಣಕ್ಕೆ ಸಲ್ಲದ ಆರೋಪ ಮಾಡಿ, ಸ್ವಾರ್ಥಕ್ಕಾಗಿ ಜನಾಂಗವನ್ನು ಬಳಸಿಕೊಳ್ಳಲಾಗುತ್ತಿದೆ. ಶಾಸಕರ ಸಮಾಜಮುಖಿ ಕಾರ್ಯ, ಅಭಿವೃದ್ಧಿ ಸಹಿಸದ ಸ್ವಯಂಘೋಷಿತ ನಾಯಕರು ಸಮುದಾಯಕ್ಕೆ ಮಾರಕವಾಗಿದ್ದಾರೆ. ನಮ್ಮಲ್ಲಿ ಯಾವುದೇ ಪಂಗಡ ಇಲ್ಲ. ನಾವೆಲ್ಲ ಒಂದೇ. ಸಮಾಜದ ಜಿಲ್ಲಾಧ್ಯಕ್ಷ ಮೀಸೆ ಮಹಲಿಂಗಪ್ಪ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಎಪಿಎಂಸಿ ಮಾಜಿ ಅಧ್ಯಕ್ಷ ಉಗ್ರಮೂರ್ತಿ, ಕರಿಯಪ್ಪ, ದಾಸಪ್ಪ, ಪುಟ್ಟಣ್ಣ, ಚಿಕ್ಕಣ್ಣ, ತಮ್ಮಣ್ಣ, ಶ್ರವಣಗೆರೆ ಶಿವಣ್ಣ, ಶಿವಮೂರ್ತಿ, ಪಾಂಡು, ವಿಜಯ್, ರಾಘವೇಂದ್ರ, ಚಿತ್ತಯ್ಯ, ರಾಮಣ್ಣ ಇತರರಿದ್ದರು.