ಹಿರಿಯೂರಿನಲ್ಲಿ ಏಕಾದಶಿ ಸಂಭ್ರಮ

HYR vykunta 06
Published on

ಹಿರಿಯೂರು: ಇಲ್ಲಿನ ಶ್ರೀ ಲಕ್ಷ್ಮೀವೆಂಕಟೇಶ್ವರ ದೇಗುಲದಲ್ಲಿ ಸೋಮವಾರ ವೈಕುಂಠ ಏಕಾದಶಿ ಧಾರ್ಮಿಕ ಕಾರ್ಯಕ್ರಮಗಳು ಸಂಭ್ರಮದಿಂದ ನಡೆದವು.

ದೇಗುಲದಲ್ಲಿ ಸುಪ್ರಭಾತ, ಅಭಿಷೇಕ, ಅರ್ಚನೆ, ಹೂವಿನ ಅಲಂಕಾರ, ದೇವಸ್ಥಾನದ ಮಹಿಳಾ ಮಂಡಳಿ ಸದಸ್ಯರಿಂದ ವಿಷ್ಣು ಸಹಸ್ತ್ರನಾಮ ಪಾರಾಯಣ, ಮಹಾದ್ವಾರದ ಪ್ರಾರಂಭೋತ್ಸವ, ಭಜನಾ ಕಾರ್ಯಕ್ರಮ, ಮಹಾಮಂಗಳಾರತಿ, ಲಡ್ಡು ಪ್ರಸಾದ ವಿನಿಯೋಗ ಇನ್ನಿತರ ಕಾರ್ಯಗಳು ಜರುಗಿದವು.

ಮುಂಜಾನೆಯಿಂದ ನೂರಾರು ಭಕ್ತರು ಶ್ರದ್ಧಾಭಕ್ತಿಯಿಂದ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.

ದೇವಾಲಯ ಸೇವಾ ಸಮಿತಿಯ ಡಿ.ತಿಪ್ಪೇಸ್ವಾಮಿ, ಸುಬ್ರಮಣ್ಯ ದೀಕ್ಷಿತ್, ಗುರುದೇವ್, ನರೇಂದ್ರ ಬಾಬು, ಮಂಜುನಾಥ್, ಸುರೇಶ್, ಪಾಂಡುರಂಗಯ್ಯ, ನಾಗರಾಜಪ್ಪ, ಮಧುಸೂದನ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net