ವಿವಿ ಪುರದಲ್ಲಿ ಕರೊನಾ ಜಾಗೃತಿ ಸಭೆ

HYR vv pura 19
Published on

ಹಿರಿಯೂರು: ಕರೊನಾ ವೈರಸ್ ಬಗ್ಗೆ ಜನರಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಶ್ರಮಿಸಬೇಕು ಎಂದು ಡಾ.ಶ್ರೀಹರ್ಷ ತಿಳಿಸಿದರು.

ತಾಲೂಕಿನ ವಿವಿ ಪುರ ಸರ್ಕಾರಿ ಆಸ್ಪತ್ರೆಯಲ್ಲಿ ಗುರುವಾರ ಕರೊನಾ ವೈರಸ್ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದರು.

ರಾಜ್ಯದಲ್ಲಿ ಮಾರಕ ರೋಗ ನಿಯಂತ್ರಣಕ್ಕೆ ಬರುವ ತನಕ ಸರ್ಕಾರದ ಆದೇಶವನ್ನು ಎಲ್ಲರೂ ಪಾಲಿಸಿ, ರೋಗ ತಡೆಗೆ ಜನರಲ್ಲಿ ಅರಿವು ಮೂಡಿಸುವುದರ ಜತೆಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಡಾ.ಸುನೀತಾ, ಗ್ರಾ.ಪಂ. ಅಧ್ಯಕ್ಷ ವೆಂಕಟೇಶ್, ಡಿಎಚ್‌ಇಒ ಆನಂದಪ್ಪ, ವೆಂಕಟೇಶ್, ನಾಗರಾಜ್, ಪಿಡಿಒ ಹನ್ಸಿರಾ ಬಾನು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net