ಮಳೆ ಗಾಳಿಗೆ ತೋಟಗಾರಿಕೆ ಬೆಳೆ ನಾಶ

HYR bele haani 08
Published on

ಹಿರಿಯೂರು: ತಾಲೂಕಿನ ವಿವಿಧೆಡೆ ಮಂಗಳವಾರ ಸಂಜೆ ಸುರಿದ ಬಿರುಗಾಳಿ ಸಹಿತ ಮಳೆಗೆ ಅಪಾರ ಪ್ರಮಾಣದ ತೋಟಗಾರಿಕೆ ಬೆಳೆ ನಾಶವಾಗಿದೆ.

ತಾಲೂಕಿನ ಇದ್ದಲ ನಾಗೇನಹಳ್ಳಿ, ಉಡುವಳ್ಳಿ, ಚಳಮಡು, ಹುಲಗಲಕುಂಟೆ, ಪರಮೇನಹಳ್ಳಿ, ರಂಗಾಪುರ, ಗೌಡನಹಳ್ಳಿ, ಹಿಂಡಸಕಟ್ಟೆ, ಗಾಂಧಿನಗರ ಇತರೆಡೆ ಬೆಳೆಗಳಿಗೆ ಹಾನಿಯಾಗಿದೆ.

ಮನೆಗೆ ಹಾನಿ: ಬಿರುಗಾಳಿಗೆ ಚಳಮಡು-ಹುಲಗಲಕುಂಟೆ ಗ್ರಾಮದಲ್ಲಿ ಗುಡಿಸಲು, ಮನೆಯ ಸೀಟುಗಳಿಗೆ ಹಾಳಾಗಿದ್ದು ಕಂದಾಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಲಾಕ್‌ಡೌನ್‌ನಿಂದ ತೋಟಗಾರಿಕೆ ಬೆಳೆಗಳಾದ ಬಾಳೆ, ದಾಳಿಂಬೆ, ಅಡಕೆ, ತೆಂಗು ಮಾರುಕಟ್ಟೆ ತಲುಪುವ ಮುನ್ನವೇ ಅಕಾಲಿಕ ಮಳೆಗೆ ಮಣ್ಣುಪಾಲಾಗಿದ್ದು, ಸಂಕಷ್ಟದಲ್ಲಿದ್ದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net