ವಿಶ್ವ ಶಾಂತಿ ಸಾರಿದ ಮಹಾನ್ ಚೇತನ

Hiriyur Vemana Jayantyutsava
Published on

ಹಿರಿಯೂರು: ಮಹಾಯೋಗಿ ವೇಮನರು ವಿಶ್ವ ಶಾಂತಿ ಸಾರಿದ ಮಹಾನ್ ಚೇತನ ಎಂದು ಪ್ರಾಚಾರ್ಯ ಡಾ.ಧರಣೀಂದ್ರಯ್ಯ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ವೇಮನರು ಜಾತಿ-ಧರ್ಮಗಳನ್ನು ಮೀರಿ ವಿಶ್ವ ಶಾಂತಿ ಸಾರಿ, ಮನುಕುಲಕ್ಕೆ ಮಹತ್ತರ ಸಂದೇಶವನ್ನು ನೀಡಿದ ಸಾಧಕರು. ಆದರ್ಶ ಜೀವನವನ್ನು ನಡೆಸಿ ಸಮಾಜಕ್ಕೆ ಅನುಕರಣೀಯ ತತ್ವಗಳನ್ನು ವಚನಗಳ ಮೂಲಕ ಭೋದಿಸಿದರು ಎಂದರು.

ಶಿರಸ್ತೇದಾರ್ ತಿಪ್ಪೇಸ್ವಾಮಿ, ರಾಮಚಂದ್ರಪ್ಪ, ಗಿರೀಶ್ ರೆಡ್ಡಿ, ಪ್ರಕಾಶ್ ರೆಡ್ಡಿ, ಮನೋಹರ, ಶ್ರೀನಿವಾಸ್ ರೆಡ್ಡಿ, ಶ್ರೀರಂಗಮ್ಮ, ಮಧುಮತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net