ಹಬ್ಬದ ಸಾಮಗ್ರಿ ಖರೀದಿಗೆ ಮುಗಿಬಿದ್ದ ಜನ

HYR cmc 23
Published on

ಹಿರಿಯೂರು: ತಾಲೂಕಿನ ವಿವಿಧೆಡೆ ವಾರದ ಸಂತೆ ಬಂದ್ ಮಾಡಲಾಗಿದ್ದು, ಯುಗಾದಿ ಪ್ರಯುಕ್ತ ತರಕಾರಿ, ದಿನಸಿ, ಆಹಾರ ಸಾಮಗ್ರಿ ಸೇರಿ ಅಗತ್ಯ ವಸ್ತುಗಳನ್ನು ಕೊಳ್ಳಲು ಗ್ರಾಮೀಣ ಭಾಗದ ಸಾವಿರಾರು ಸಂಖ್ಯೆಯ ಜನರು ಸೋಮವಾರ ಹಿರಿಯೂರಿನಲ್ಲಿ ಜಮಾಯಿಸಿದ್ದರು.

ಸರ್ಕಾರಿ ಬಸ್ ಸೇವೆ ಸಂಪೂರ್ಣವಾಗಿ ಸ್ಥಗಿತವಾಗಿತ್ತು, ಖಾಸಗಿ ಬಸ್, ಆಟೋ, ದ್ವಿ-ಚಕ್ರ ವಾಹನಗಳ ಸಂಚಾರಕ್ಕೆ ಯಾವುದೇ ಕಡಿವಾಣ ಬೀಳಲಿಲ್ಲ. ಆದರೆ, ರಾಜ್ಯದ ವಾಹನಗಳು ಆಂಧ್ರಪ್ರದೇಶ ಗಡಿ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು.

ಹರಿಯಬ್ಬೆ ಸಂತೆ ಬಂದ್ ಮಾಡಿಸಿದ ಪೊಲೀಸರು: ಕರೊನಾ ಭಯಭೀತಿಗೆ ಜಿಲ್ಲೆಯಲ್ಲಿ 144 ಸೆಕ್ಷನ್ ಜಾರಿಯಲ್ಲಿದ್ದು, ಸಂತೆ, ಬೃಹತ್ ಧಾರ್ಮಿಕ ಸಮಾಂಭ, ಜಾತ್ರೆ ಆಚರಣೆಗೆ ನಿಷೇಧ ಹೇರಲಾಗಿದೆ. ಈ ಮಧ್ಯೆ ಹರಿಯಬ್ಬೆ ಗ್ರಾಮದಲ್ಲಿ ಸೋಮವಾರ ಸಂತೆ ನಿರ್ಭಿತಿಯಿಂದ ಜರುಗುತ್ತಿತ್ತು. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಸಂತೆ ಬಂದ್ ಮಾಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net