ಯತ್ನಾಳ್ ರಾಜೀನಾಮೆಗೆ ಆಗ್ರಹ

HYR valmiki 11
Published on

ಹಿರಿಯೂರು: ವಿಧಾನಸಭೆ ಅಧಿವೇಶನದಲ್ಲಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಆದಿಕವಿ ವಾಲ್ಮೀಕಿ ಮಹರ್ಷಿ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ನಾಯಕ ಸಮಾಜದ ಮುಖಂಡರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ರಾಮಾಯಣ ಮಹಾಗ್ರಂಥವನ್ನು ರಚಿಸಿ ಜಗತ್ತಿಗೆ ಕೊಡುಗೆ ನೀಡಿದ ವಾಲ್ಮೀಕಿ ಅವರನ್ನು ಜಾತಿ ನಿಂದನೆ ಮಾಡಿರುವುದು ಖಂಡನೀಯ. ಯತ್ನಾಳ್ ಅವರನ್ನು ಶಾಸಕ ಸ್ಥಾನದಿಂದ ಉಚ್ಛಾಟಿಸಿ, ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ತಹಸೀಲ್ದಾರ್ ಸತ್ಯನಾರಾಯಣ ಅವರಿಗೆ ಮನವಿ ಸಲ್ಲಿಸಿದರು.

ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ಅಧ್ಯಕ್ಷ ರಾಜು, ಗೌರವಾಧ್ಯಕ್ಷ ಆರ್.ಪುಟ್ಟರಂಗಪ್ಪ, ಜೋಗಪ್ಪ, ಕೃಷ್ಣಪ್ಪ, ಮಂಜುನಾಥ್, ಸಿದ್ದರಾಮಣ್ಣ, ರಮೇಶ್, ಕುಮಾರ್, ನಾಗರಾಜಪ್ಪ, ಭೀಮಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net