ಹಿರಿಯೂರು ಬಿಜೆಪಿ ಒಳಜಗಳಕ್ಕೆ ಮದ್ದು ?

BJP 1 download
Published on

ಹಿರಿಯೂರು : ಹಿರಿಯೂರು ಬಿಜೆಪಿ ಮಂಡಲ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಾನೊಂದು ತೀರ- ನೀನೊಂದು ತೀರ ಎಂದು ದೂರ ಸರಿದಿದ್ದ ತಾಲೂಕು ಘಟಕದ ಎರಡು ಗುಂಪುಗಳ ನಡುವೆ ಸಾಮರಸ್ಯ ತರುವ ಪ್ರಯತ್ನ ಪಕ್ಷದೊಳಗೆ ಶುರುವಾಗಿದೆ.

ಈ ಸಂಬಂಧ ಬಿಜೆಪಿ ಜಿಲ್ಲಾಧ್ಯಕ್ಷ ಮುರುಳಿ ಅವರು ಪಕ್ಷದ ಕಚೇರಿಯಲ್ಲಿ ತಡರಾತ್ರಿ ಎರಡೂ ಗುಂಪುಗಳ ನಾಯಕರ ಜತೆ ಮಾತುಕತೆ ನಡೆಸಿ ಅವರ ನಡುವಿನ ಮನಸ್ತಾಪಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರು.

ಪರ - ವಿರೋಧ ಬದಿಗಿಟ್ಟು ಎಲ್ಲರೂ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು.ಏಕತೆ ಕಾಪಾಡಿಕೊಳ್ಳದಿದ್ದರೆ ಹಿರಿಯೂರಲ್ಲಿ ಪಕ್ಷದ ಬೆಳವಣಿಗೆಗೆ ಅಡ್ಡಿಯಾಗುತ್ತದೆ ಎಂದು ಪಕ್ಷದ ಹಿರಿಯ ಮುಖಂಡರನ್ನು ತರಾಟೆಗೆ ತೆಗೆದುಕೊಂಡರು.

ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಇಲ್ಲಿ ವ್ಯಕ್ತಿ ಪೂಜೆಗೆ ಅವಕಾಶವಿಲ್ಲ. ತತ್ವ, ಸಿದ್ಧಾಂತ ಅಳವಡಿಸಿಕೊಂಡು ಸಂಘಟನೆಯಲ್ಲಿ ತೊಡಗಬೇಕು ಎಂದು ಸೂಚಿಸಿದರು. ಇದೇ ವೇಳೆ ಹಿರಿಯೂರಲ್ಲಿ ಬಿಜೆಪಿ ಕಚೇರಿ ತೆರೆಯಲು ಸಲಹೆ ನೀಡಿದರು.

ಪಕ್ಷದ ಮುಖಂಡರಾದ ಡಿ.ಟಿ.ಶ್ರೀನಿವಾಸ್, ಹಿರಿಯೂರು ಮಂಡಲ ಅಧ್ಯಕ್ಷ ವಿಶ್ವನಾಥ್, ನಗರಸಭೆ ಮಾಜಿ ಸದಸ್ಯ ಪ್ರೇಮಕುಮಾರ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net