

ಹಿರಿಯೂರು: ಜಗತ್ತಿಗೆ ಶಾಂತಿ, ನೆಮ್ಮದಿ ಸೂತ್ರ ಉಪದೇಶಿಸಿದ ಭಗವಾನ್ ಮಹಾವೀರರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸುವ ಅಗತ್ಯವಿದೆ ಎಂದು ತಹಸೀಲ್ದಾರ್ ಜಿ.ಎಚ್.ಸತ್ಯನಾರಾಯಣ ಹೇಳಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ತಾಲೂಕು ಆಡಳಿತದಿಂದ ಹಮ್ಮಿಕೊಂಡಿದ್ದ ಮಹಾವೀರ ಜಯಂತ್ಯುತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೈನ ಸಮಾಜದ ಮುಖಂಡ ಬಾಬುಲಾಲ್ ಬಲಾರ್ ಮಾತನಾಡಿ, ಕರೊನಾ ಸಂಕಷ್ಟದ ಸ್ಥಿತಿಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ಜಯಂತಿ ಆಚರಿಸಿದ್ದು ಶ್ಲಾಘನಾರ್ಹ ಎಂದರು.
ವಾಣಿ ಕಾಲೇಜಿನ ಪ್ರಾಚಾರ್ಯ ಡಾ.ಡಿ.ಧರಣೇಂದ್ರಯ್ಯ, ನಗರಸಭೆ ಆಯುಕ್ತ ಶಿವಪ್ರಸಾದ್, ತಾಪಂ ಇಒ ಹನುಮಂತಪ್ಪ, ಬಿಇಒ ಪಿ.ರಾಮಯ್ಯ, ಮಹಾವೀರ ಜೈನ ಸಮುದಾಯದ ಅಧ್ಯಕ್ಷ ಜಯಂತಿಲಾಲ್ ಬಲಾರ್, ಮುಖಂಡರಾದ ಧನ್‌ರಾಜ್ ಜೈನ್, ಬಾಬುಲಾಲ್ ಬಲಾರ್, ಮಾಂಗಿಲಾಲ್ ಜೈನ್, ಪ್ರಕಾಶ್ ಜೈನ್, ಅಶೋಕ್ ಜೈನ್, ಸುರೇಶ್ ಜೈನ್, ರಾಣ್ ಮಲ್ ಜೀ, ವಿಜಯ್, ಮದನ್, ಕಿಶೋರ್ ಇತರರಿದ್ದರು.