ಕುಡಿವ ನೀರು ಪೂರೈಕೆಗೆ ಸೂಚನೆ

UMESH A
Published on

ಹಿರಿಯೂರು: ತಾಲೂಕಿನ ವಿವಿ ಪುರ ಗ್ರಾಪಂ ವ್ಯಾಪ್ತಿಯ 11 ಗ್ರಾಮಗಳಿಗೆ ಶಾಶ್ವತ ಕುಡಿವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಎ.ಉಮೇಶ್ ತಿಳಿಸಿದ್ದಾರೆ.

ವಿವಿ ಸಾಗರ ಜಲಾಶಯದಿಂದ ನೇರ ಪೈಪ್‌ಲೈನ್ ಮೂಲಕ ಐಮಂಗಲ ಹೋಬಳಿಗೆ ಶಾಶ್ವತ ಕುಡಿವ ನೀರು ಪೂರೈಕೆ ಮಾಡುವ ಬಹು ಗ್ರಾಮ ಕುಡಿವ ನೀರಿನ ಯೋಜನೆ ಮುಕ್ತಾಯದ ಹಂತ ತಲುಪಿದೆ.

ವಿವಿ ಸಾಗರ ಜಲಾಶಯದ ತಪ್ಪಲಿನ ಗ್ರಾಮದ ಜನತೆ ಹನಿ ನೀರಿಗೂ ಪರಿತಪಿಸುವಂತಾಗಿತ್ತು. ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿರಲಿಲ್ಲ. ಬಹು ಗ್ರಾಮ ಯೋಜನೆಯಲ್ಲಿ 11 ಗ್ರಾಮಗಳನ್ನು ಸೇರ್ಪಡೆಯಾಗುವ ಕಾಲ ಸನ್ನಿಹಿತವಾಗಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net