

ಹಿರಿಯೂರು: ತಾಲೂಕಿನ ರಂಗನಾಥಪುರದಲ್ಲಿ ಕುಡಿವ ನೀರು ಪೂರೈಕೆಯ ಪೈಪ್‌ಲೈನ್ ಚರಂಡಿಯಲ್ಲಿ ಅಳವಡಿಸಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಸರಬರಾಜಾಗುವ ಕುಡಿವ ನೀರಿನ ಪೈಪ್‌ಲೈನ್ ಚರಂಡಿಯಲ್ಲಿ ಅಳವಡಿಸಿದ್ದರಿಂದ ಕಲುಷಿತ ನೀರು ಪೂರೈಕೆಯಾಗುವ ಭೀತಿ ಎದುರಾಗಿದೆ.
ಕಳೆದ ಒಂದು ವರ್ಷದಿಂದ ಗ್ರಾಪಂ ಜನಪ್ರತಿನಿಧಿಗಳು, ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ವಚ್ಛತೆ, ಚರಂಡಿ, ಬೀದಿ ದೀಪ ನಿರ್ವಹಣೆಯಲ್ಲಿ ಗ್ರಾಮಾಡಳಿತ ವಿಫಲವಾಗಿದೆ ಎಂದು ದೂರಿದ್ದಾರೆ.
ತಾಪಂ ಇಒ ಹನುಮಂತಪ್ಪ ಹೇಳಿಕೆ: ಬೇರೆ ಮಾರ್ಗದಲ್ಲಿ ಕುಡಿವ ನೀರಿನ ಪೈಪ್‌ಲೈನ್ ಅಳವಡಿಸಲು ತಕ್ಷಣ ಕ್ರಮ ಕೈಗೊಳ್ಳಲಾಗುವುದು. ಗ್ರಾಮದಲ್ಲಿ ಸ್ವಚ್ಛತೆ ಕಾಪಾಡಲು ಸಂಬಂಧಿಸಿದ ಪಿಡಿಒಗೆ ಸೂಚಿಸಲಾಗಿದೆ.