ಇಂದು ಕೋಡಿ ತಿಮ್ಮಪ್ಪ ದೇಗುಲ ಉದ್ಘಾಟನೆ

HYR thimmappa swamy 04
Published on

ಹಿರಿಯೂರು: ತಾಲೂಕಿನ ಬೇತೂರುಪಾಳ್ಯ ಗ್ರಾಮದ ಶ್ರೀ ಕೋಡಿ ತಿಮ್ಮಪ್ಪಸ್ವಾಮಿ ದೇವಸ್ಥಾನ ಫೆ.5ರಂದು ಲೋಕಾರ್ಪಣೆಗೊಳ್ಳಲಿದೆ.

ಫೆ.5ರಂದು ಕೊಲ್ಲಾಪುರದಮ್ಮ ದೇವಿ ಪೂಜೆ, ಗರುಡ ಉತ್ಸವ, ಕಳಸ ಮೆರವಣಿಗೆ, ಹೋಮ-ಹವನ, ನಾಗರ ಪ್ರತಿಷ್ಠಾಪನೆ, ಫೆ.6ರಂದು ಗಣಪತಿ ಪೂಜೆ, ಸ್ವಾಮಿ ಶಾಂತನಂದ ತೀರ್ಥರು-ಶ್ರೀ ದಾಸಪ್ಪ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧ್ವಜ ಕುಂಭಾರಾಧನೆ, ಕಳನ್ಯಾಸ, ಪ್ರಾಣ ಪ್ರತಿಷ್ಠಾದಿ ಹೋಮ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿವೆ.

ಫೆ.7ರಂದು ಗೋದರ್ಶನ, ಅಭಿಷೇಕ, ಯಾಗಶಾಲ ಪ್ರವೇಶ, ದ್ವಾರ ತೋರಣ ಕುಂಭಾರಾಧನೆ, ಶ್ರೀ ಸ್ವಾಮಿಗೆ ಪ್ರಥಮಾರಾಧನೆ, ಕಲ್ಯಾಣೋತ್ಸವ, ಅನ್ನಸಂತರ್ಪಣೆ ಇತರ ಧಾರ್ಮಿಕ ಕಾರ್ಯಕ್ರಮ ನೆರವೇರಲಿವೆ.

ಶ್ರೀ ನಂಜಾವಧೂತ ಸ್ವಾಮೀಜಿ, ಶಾಸಕಿ ಕೆ.ಪೂರ್ಣಿಮಾ, ಸಂಸದ ನಾರಾಯಣಸ್ವಾಮಿ, ಶಾಸಕರಾದ ಜಿ.ಎಚ್.ತಿಪ್ಪಾರೆಡ್ಡಿ, ರಘುಮೂರ್ತಿ, ವೀರಭದ್ರಯ್ಯ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಡಿ.ಸುಧಾಕರ್, ಮಾಜಿ ಸಂಸದ ಸಿ.ಪಿ.ಮೂಡಲಗಿರಿಯಪ್ಪ, ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ, ದೇಗುಲದ ಸಂಸ್ಥಾಪಕ ಅಧ್ಯಕ್ಷ ಬಿ.ಕೆ.ಸೀತಾರಾಮಯ್ಯ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ದೇವಸ್ಥಾನದ ಸೇವಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net