

ಹಿರಿಯೂರು: ರಾಜ್ಯ ಸರ್ಕಾರ ಸರ್ವ ಸ್ಪರ್ಶಿ-ಪಾರದರ್ಶಕ ಆಡಳಿತ ಮೂಲಕ ಜನರ ಪ್ರೀತಿ ವಿಶ್ವಾಸ ಗಳಿಸಿದೆ ಎಂದು ಬಿಜೆಪಿ ಮುಖಂಡ ಡಿ.ಟಿ. ಶ್ರೀನಿವಾಸ್ ಹೇಳಿದರು.
ತಾಲೂಕಿನ ಜೆ.ಜಿ.ಹಳ್ಳಿ ಹೋಬಳಿಯ ವಿವಿಧೆಡೆ 5.5 ಕೋಟಿ ರೂ. ವೆಚ್ಚದಲ್ಲಿ ಗೊಲ್ಲರಹಟ್ಟಿಯ ಅಭಿವೃದ್ಧಿ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಲಾಕ್‌ಡೌನ್ ಪರಿಸ್ಥಿತಿಯನ್ನು ಕೇಂದ್ರ-ರಾಜ್ಯ ಸರ್ಕಾರ ಸಮರ್ಥವಾಗಿ ನಿಭಾಯಿಸಿ, 20 ಲಕ್ಷ ಕೋಟಿ ರೂ. ವೆಚ್ಚದ ಜನಪರ ಯೋಜನೆ ಘೋಷಿಸಿ ಸಂಕಷ್ಟದಲ್ಲಿ ಜನರಿಗೆ ನೆರವಾಗಿವೆ ಎಂದರು.
ಜಿಪಂ ಸದಸ್ಯ ಪಾಪಣ್ಣ, ತಾಪಂ ಸದಸ್ಯ ಜಯರಾಮಯ್ಯ, ನಾಗೇಂದ್ರಪ್ಪ, ವಿಶ್ವನಾಥ್, ಸುರೇಶ್, ಈಶ್ವರಪ್ಪ, ನಿರಂಜನಮೂರ್ತಿ, ನಗರಸಭೆ ಮಾಜಿ ಅಧ್ಯಕ್ಷ ಟಿ. ಚಂದ್ರಶೇಖರ್ ಇತರರಿದ್ದರು.