ಜನರ ಸಹಕಾರಕ್ಕೆ ವಿಶೇಷ ಆದ್ಯತೆ ಅಗತ್ಯ

HYR nandhi halli 06
Published on

ಹಿರಿಯೂರು: ರಾಜ್ಯ ಸರ್ಕಾರ ಲಾಕ್ ಡೌನ್‌ನಿಂದ ಸಂಕಷ್ಟದಲ್ಲಿರುವ ಜನರ ಸಹಕಾರಕ್ಕೆ ವಿಶೇಷ ಆದ್ಯತೆ ನೀಡಬೇಕು ಎಂದು ಜಿಪಂ.ಸದಸ್ಯ ಆರ್.ನಾಗೇಂದ್ರನಾಯ್ಕ ಹೇಳಿದರು.

ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ಸಾರ್ವಜನಿಕರಿಗೆ ಬುಧವಾರ ಸ್ಯಾನಿಟೈಸರ್-ಮಾಸ್ಕ್ ವಿತರಿಸಿ ಮಾತನಾಡಿ, ತಾಲೂಕಿನ ರೈತರು ಬರ, ಅಂತರ್ಜಲ ಕುಸಿತ, ಬೆಳೆ ನಷ್ಟದಿಂದ ತೀರ್ವ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈರುಳ್ಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಜಮೀನಿನಲ್ಲಿ ಕೊಳೆಯುತ್ತಿವೆ, ಜಿಲ್ಲೆಯಲ್ಲಿ ಈರುಳ್ಳಿ ಖರೀದಿ ಕೇಂದ್ರ ತೆರೆಯಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಗ್ರಾಮದ ಆಸ್ಪತ್ರೆಗೆ ಭೇಟಿ ನೀಡಿ ಮೂಲ ಸೌಲಭ್ಯ ಪರಿಶೀಲಿಸಿ, ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರಿಗೆ ಸ್ಯಾನಿಟೈಸರ್-ಮಾಸ್ಕ್ ವಿತರಿಸಿದರು.

ಚಿತ್ರದುರ್ಗ ಜಿಲ್ಲೆ ಹಸಿರು ವಲಯದಲ್ಲಿದೆ ಎಂದು ನಿರ್ಲಕ್ಷ್ಯ ವಹಿಸಿದರೆ ಕರೊನಾ ಸೋಂಕು ಪಸರಿಸುವ ಅಪಾಯವಿದೆ. ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಆರೋಗ್ಯದ ಕಡೆ ಜಾಗೃತೆ ವಹಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net