ಖಡೇನಹಳ್ಳಿಯಲ್ಲಿ ಯರ್ರಿತಾತ ಸ್ವಾಮಿ ಜಾತ್ರೆ

HYR knd tmpl 05
Published on

ಹಿರಿಯೂರು: ತಾಲೂಕಿನ ಖಂಡೇನಹಳ್ಳಿ ಗ್ರಾಮದ ಶ್ರೀ ಯರ‌್ರಿತಾತ ಸ್ವಾಮಿ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಸ್ವಾಮಿಗೆ ಅಭಿಷೇಕ, ಗಂಗಾಪೂಜೆ, ಭಜನೆ, ಧ್ವಜಾರೋಹಣ, ಪುಷ್ಪಾಲಂಕಾರ, ಹೋಮ-ಹವನ, ಅನ್ನಸಂತರ್ಪಣೆ, ಮಹಾಮಂಗಳಾರತಿ ಉತ್ಸವ ಮೂರ್ತಿ ಮೆರವಣಿಗೆ ಇತರ ಧಾರ್ಮಿಕ ಕಾರ್ಯ ಜರುಗಿದವು.

ಯರ‌್ರಿತಾತ ಸ್ವಾಮಿ ಉತ್ಸವ ಮೂರ್ತಿಯನ್ನು ಗ್ರಾಮದ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ರಾತ್ರಿ ಪೂರ್ತಿ ಭಜನೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಚಿತ್ರದುರ್ಗ ಜಿಲ್ಲೆ ಹಾಗೂ ಆಂಧ್ರದಿಂದ ನೂರಾರು ಭಕ್ತರು ಆಗಮಿಸಿದ್ದರು.

ಯರ‌್ರಿತಾತ ಆಶ್ರಮದ ತಿಪ್ಪೇ ಸ್ವಾಮೀಜಿ, ಗ್ರಾಪಂ ಅಧ್ಯಕ್ಷ ರಾಘವೇಂದ್ರ, ಉಪಾಧ್ಯಕ್ಷೆ ಮಂಗಳಾ ಯೋಗೇಶ್, ಸದಸ್ಯರಾದ ಸಾವಿತ್ರಮ್ಮ, ಶ್ರೀನಿವಾಸ್, ಬಸವರಾಜ್, ಈಶ್ವರಪ್ಪ, ಸೌಮ್ಯ, ಶಿವಮ್ಮ, ಮಾಜಿ ಅಧ್ಯಕ್ಷ ತಿಮ್ಮರಾಯ, ಮೀನಾಕ್ಷಿ ಚಿದಾನಂದ್, ಡಿ.ಜಿ.ಗೋವಿಂದರಾಜ್, ದೇವಸ್ಥಾನ ಸೇವಾ ಸಮಿತಿಯ ನಿಂಗಪ್ಪ, ದೇವರಾಜ್, ಎಸ್.ಕೆ. ಶಿವಮೂರ್ತಿ, ಹನುಮಂತರಾಯ, ಗೋವಿಂದಪ್ಪ, ನರಸಿಂಹಮೂರ್ತಿ, ಯಜಮಾನ್ ನಿಂಗಪ್ಪ, ವಿಜಯ್, ಮಾರುತಿ, ಶ್ರೀನಿವಾಸ್, ಚಿದಾನಂದ್, ದಾಸರಿ, ತಿಮ್ಮಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net