ಶೇಷಪ್ಪನಹಳ್ಳಿಗೆ ಅಗತ್ಯ ಸೌಲಭ್ಯ

Hiriyur, Sheshappanahalli, Problem,
Published on

ಹಿರಿಯೂರು: ತಾಲೂಕಿನ ಅತಿ ಹಿಂದುಳಿದ ಶೇಷಪ್ಪನಹಳ್ಳಿ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶ್ ಬಾಬು ಹೇಳಿದರು.

ಗ್ರಾಮಕ್ಕೆ ಗುರವಾರ ಭೇಟಿ ನೀಡಿ ಮೂಲ ಸೌಲಭ್ಯ ಪರಿಶೀಲನೆ ನಡೆಸಿದ ವೇಳೆ ಮಾತನಾಡಿ, ರಸ್ತೆ, ಚರಂಡಿ, ಕುಡಿವ ನೀರು, ವಿದ್ಯುತ್ ದೀಪ ಸೇರಿ ಗ್ರಾಮದಲ್ಲಿ ಹಲವು ಮೂಲ ಸೌಲಭ್ಯ ಕೊರತೆಯಿಂದ ಗ್ರಾಮಸ್ಥರು ಪರದಾಡುವಂತಾಗಿದೆ ಎಂದು ಬೇಸರಿಸಿದರು.

ಈ ಬಗ್ಗೆ ಗ್ರಾಮದ ಯುವಕ ಕಿರಣ್ ಕುಮಾರ್ ಪ್ರಧಾನಿಗೆ ಪತ್ರ ಬರೆದು ಗ್ರಾಮದ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ್ದು, ಈಗಾಗಲೇ ಜಿಲ್ಲಾಧಿಕಾರಿ, ಜಿಪಂ ಸಿಇಒ ಗ್ರಾಮಕ್ಕೆ ಮೂಲ ಸೌಕರ್ಯ ಕಲ್ಪಿಸಲು ತುರ್ತು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದರು.

ಪಡಿತರ ತರಲು 3 ಕಿ.ಮೀ. ದೂರದ ಹಾಲುಮಾದೇನಹಳ್ಳಿ ಗ್ರಾಮಕ್ಕೆ ಹೋಗಬೇಕು, ನಮ್ಮೂರಲ್ಲೇ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳವಂತೆ ಮಹಿಳೆಯರು ಮನವಿ ಮಾಡಿದರು.

ತಾಪಂ ಇಒ ಹನುಮಂತಪ್ಪ, ಕಾಂತರಾಜ್, ಧರ್ಮೇಂದ್ರ, ನರಸಿಂಹಪ್ಪ ಕೆಪಿಸಿಸಿ ಸದಸ್ಯ ಸುರೇಶ್ ಬಾಬು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net