ರಾಷ್ಟ್ರಭಕ್ತಿಯ ಜಾಗೃತಿಗೆ ಪಥ ಸಂಚಲನ

HYR Rss 16
Published on

ಹಿರಿಯೂರು; ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಸೇವಕರು ಹಿರಿಯೂರಲ್ಲಿ ಬುಧವಾರ ಪಥ ಸಂಚಲನ ನಡೆಸಿದರು.

ವಾಗ್ದೇವಿ ಶಾಲಾ ಆವರಣದಿಂದ ಹೊರಟ ಪಥ ಸಂಚಲನ, ಲಕ್ಕವ್ವನಹಳ್ಳಿ ರಸ್ತೆ, ಹುಳಿಯಾರು ರಸ್ತೆ, ತೇರುಮಲ್ಲೇಶ್ವರ ದೇಗುಲ ರಸ್ತೆ, ಗಾಂಧಿ ವೃತ್ತ, ರಾಜ ಬೀದಿ ಮೂಲಕ ತೆರಳಿ ಗುರುಭವನ ಬಳಿ ಸಮಾವೇಶ ಗೊಂಡಿತು.

ಆರ್‌ಎಸ್‌ಎಸ್ ದಕ್ಷಿಣ ಭಾರತ ಕಾರ್ಯ ನಿರ್ವಾಹಕ ನಾ.ತಿಪ್ಪೇಸ್ವಾಮಿ ಮಾತನಾಡಿ, ಯುವಜನರಲ್ಲಿ ದೇಶ ಪ್ರೇಮ, ರಾಷ್ಟ್ರೀಯ ಮನೋಭಾವ, ಐಕ್ಯತೆ ಬೆಳೆಸುವುದು ಈ ಪಥ ಸಂಚಲನದ ಉದ್ದೇಶ ಎಂದರು.

ಸಾವಿರಕ್ಕೂ ಹೆಚ್ಚು ಸೇವಕರು ಭಾಗಿಯಾಗಿದ್ದರು, ಮಕ್ಕಳು ತ್ರಿವರ್ಣ ಧ್ವಜ ಹಿಡಿದು ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಡಿವೈಎಸ್ಪಿ ರಮೇಶ್, ಸಿಪಿಐ ಚನ್ನೇಗೌಡ, ಪಿಎಸ್‌ಐಗಳಾದ ಶಶಿಕಲಾ, ಪರಮೇಶ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಆರ್‌ಎಸ್‌ಎಸ್ ಜಿಲ್ಲಾ ಕಾರ್ಯವಾಹಕ ರಾಜ್‌ಕುಮಾರ್, ಸುಕುಮಾರ್, ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ್, ಪ್ರಧಾನ ಕಾರ್ಯ ದರ್ಶಿ ಕೇಶವಮೂರ್ತಿ, ನಿರಂಜನ್, ಎಂ.ಎಸ್.ರಾಘವೇಂದ್ರ, ಗಿರಿಸ್ವಾಮಿ, ಮಸ್ಕಲ್ ಶ್ರೀನಿವಾಸ್, ಎ.ರಾಘವೇಂದ್ರ, ಹರ್ಷ, ಡಾ.ರಾಘವೇಂದ್ರ, ಎಬಿವಿಪಿ ಎಚ್.ಆರ್.ಯೋಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net