ಪರಿಶುದ್ಧ ಭಕ್ತಿಯಿಂದ ನೆಮ್ಮದಿ

HYR vasavi 27
Published on

ಹಿರಿಯೂರು: ಪರಿಶುದ್ಧ ಭಕ್ತಿ ಮತ್ತು ಪವಿತ್ರ ಜೀವನ ನೆಮ್ಮದಿಯ ಬದುಕಿಗೆ ದಾರಿ ದೀಪವಾಗಲಿವೆ ಎಂದು ಶ್ರೀ ವೀರೇಶಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

ತಾಲೂಕಿನ ಮಸ್ಕಲ್ ಗ್ರಾಮದಲ್ಲಿ ವಾಸವಿ ಮಹಲ್ ಕಟ್ಟಡವನ್ನು ಗುರುವಾರ ಉದ್ಘಾಟಿಸಿ ಮಾತನಾಡಿ, ಮಾನವೀಯ ಮೌಲ್ಯಗಳಿಗೆ ಗೌರವ ನೀಡಬೇಕು ಎಂದರು.

ಜೀವನದಲ್ಲಿ ಉತ್ತಮ ನಡೆ-ನುಡಿ, ಸಂಸ್ಕಾರ, ಪರೋಪಕಾರ ಗುಣ, ಸಮಾಜಮುಖಿ ಕಾರ್ಯದಿಂದ ಮಾತ್ರ ಭಗವಂತನ ಪ್ರೀತಿ ಗಳಿಸಲು ಸಾಧ್ಯ. ದೇವರ ಪ್ರೀತಿ ಇಲ್ಲದೆ ಏನನ್ನೂ ಸಾಧಿಸಲಾಗದು. ಹೀಗಾಗಿ ಎಲ್ಲರೂ ದೈವ ಭಕ್ತಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶಾಸಕಿ ಕೆ.ಪೂರ್ಣಿಮಾ ಮಾತನಾಡಿ, ತಾಲೂಕಿನ ಎಲ್ಲ ಸಮುದಾಯಗಳ ಸರ್ವಾಂಗೀಣ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ವಾಸವಿ ಮಹಲ್ ಸಮುದಾಯ ಭವನಕ್ಕೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಕೆ.ವಿ.ಅಮರೇಶ್, ತಾಲೂಕಾಧ್ಯಕ್ಷ ಪ್ರಕಾಶ್ ಕುಮಾರ್, ನಾಗರಾಜ್ ಶ್ರೇಷ್ಠಿ, ಕೆ.ಆರ್. ವೆಂಕಟೇಶ್, ಆನಂದ್ ಶ್ರೇಷ್ಠಿ, ಬಾಲಾಜಿ, ಲಕ್ಷ್ಮೀಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net