ಕನಕ ದಾಸರ ಚಿಂತನೆ ಸರ್ವ ಕಾಲಕ್ಕೂ ಶ್ರೇಷ್ಠ

HYR sakkara village 10
Published on

ಹಿರಿಯೂರು: ಮಾನವೀಯ ಮೌಲ್ಯ ಮತ್ತು ಸತ್ಯದ ಸಾಕ್ಷಾತ್ಕಾರ ಮಾಡಿಸಿದ ಸಂತ ಶ್ರೇಷ್ಠ ಕನಕ ದಾಸರ ಚಿಂತನೆಗಳು ಸರ್ವ ಕಾಲಕ್ಕೂ ಶ್ರೇಷ್ಠ ಎಂದು ಜಿಪಂ ಸದಸ್ಯೆ ಶಶಿಕಲಾ ಸುರೇಶ್ ಬಾಬು ಹೇಳಿದರು.

ಕನಕ ಯುವಕ ಸಂಘ ತಾಲೂಕಿನ ಸಕ್ಕರ ಗ್ರಾಮದಲ್ಲಿ ಆಯೋಜಿಸಿದ್ದ ಕನಕ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಾಲುಮತ ಸಮಾಜ ಕನಕದಾಸರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ಇತರೆ ಸಮುದಾಯಗಳೊಂದಿಗೆ ಸಾಮರಸ್ಯದಿಂದ ಇದೆ. ಕುರುಬ ಸಮಾಜ ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದು, ಸಮಾಜ ಸಂಘಟಿತವಾಗುವ ಮೂಲಕ ಶೈಕ್ಷಣಿಕ ಮತ್ತು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದರು.

ಜಿಪಂ ಸದಸ್ಯೆ ತ್ರಿವೇಣಿ, ಡಾ.ಎಚ್.ಜಿ.ಸಿದ್ದೇಶ್ವರ, ಟಿ.ಎನ್.ಶ್ರೀರಂಗಯ್ಯ, ಎಲ್.ಮಧುಸೂದನ್, ಎಸ್.ಡಿ.ಕೆಂಚಪ್ಪ, ಕೆಂಪಣ್ಣ, ಲಕ್ಷ್ಮೀದೇವಿ, ಗೀತಾ, ಪ್ರದೀಪ್, ಭೂತೇಶ್, ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್ ಬಾಬು, ವಿ.ಹನುಮಂತರಾಯಪ್ಪ, ಸುರೇಶ್, ನಿಂಗಪ್ಪ, ಶೇಖರ್. ಕನಕ ದಾಸರ ಭಾವಚಿತ್ರ ಮೆರವಣಿಗೆ ಗ್ರಾಮದ ರಾಜಬೀದಿಯಲ್ಲಿ ಅದ್ದೂರಿಯಾಗಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net