ಉಚಿತ ಆರೋಗ್ಯ ಶಿಬಿರ ಬಡ ಜನರಿಗೆ ವರದಾನ

HYR Health camp 18
Published on

ಹಿರಿಯೂರು: ಗ್ರಾಮೀಣರ ಅನುಕೂಲಕ್ಕಾಗಿ ರೆಡ್‌ಕ್ರಾಸ್ ಸಂಸ್ಥೆಯಿಂದ ಆರೋಗ್ಯ ತಪಾಸಣೆ ಉಚಿತ ಶಿಬಿರ ಆಯೋಜಿಸಲಾಗಿದೆ ಎಂದು ಸಂಸ್ಥೆ ಕಾರ್ಯದರ್ಶಿ ಎಂ.ಎಸ್. ರಾಘವೇಂದ್ರ ಹೇಳಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಡ್‌ಕ್ರಾಸ್ ಸಂಸ್ಥೆ, ಚೈತನ್ಯ ಭಾರತಿ ಸಮರ್ಪಕ ಸೇವಾ ಟ್ರಸ್ಟ್-ಸಪ್ತಗಿರಿ ಆಸ್ಪತ್ರೆ ಬೆಂಗಳೂರು ಸಹಯೋಗದಲ್ಲಿ ಆಯೋಜಿಸಿದ್ದ ಆರೋಗ್ಯ ತಪಾಸಣೆ ಉಚಿತ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣರು ಗುಣಮಟ್ಟದ ಆರೋಗ್ಯ ಸೇವೆ ಸಿಗದೆ ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇವರಿಗೆ ಅನುಕೂಲ ಕಲ್ಪಿಸಲಿಕ್ಕಾಗಿ ಉಚಿತ ಶಿಬಿರ ಆಯೋಜಿಸಲಾಗಿದೆ ಎಂದರು.

ಪ್ರಾಚಾರ್ಯ ಡಾ.ಡಿ. ಧರಣೇಂದ್ರಯ್ಯ, ಸಂಸ್ಥೆ ಅಧ್ಯಕ್ಷ ಸುಂದರ್‌ರಾಜ್, ಉಪಾಧ್ಯಕ್ಷ ಎ. ರಾಘವೇಂದ್ರ, ಬಿ.ಕೆ. ನಾಗಣ್ಣ, ಶಶಿಕಲಾ ರವಿಶಂಕರ್, ಡಾ. ಶಿವಂ, ಡಾ. ಪ್ರಮೋದ್, ಡಾ. ನಸ್ರೀನ್, ಇಸ್ಮಾಯಿಲ್, ದೈಹಿಕ ಶಿಕ್ಷಣ ನಿರ್ದೇಶಕ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net