

ಹಿರಿಯೂರು: ಸಮಾಜದಲ್ಲಿ ಕಾನೂನು-ಶಾಂತಿ ಸುವ್ಯವಸ್ಥೆಗೆ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿ ಆರೋಗ್ಯ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದೆ ಎಂದು ಪಿಎಸ್‌ಐ ಚಂದ್ರಶೇಖರ್ ತಿಳಿಸಿದರು.
ತಾಲೂಕಿನ ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಕರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ರಾಸಾಯನಿಕ ದ್ರಾವಣ ಸಿಂಪಡಣೆಗೆ ಚಾಲನೆ ನೀಡಿ ಮಾತನಾಡಿದರು.
ಪೊಲೀಸ್ ಸಿಬ್ಬಂದಿ ಹಗಲಿರುಳು ಜನರ ಸುರಕ್ಷತೆ, ಕಾನೂನು ಕಾಪಾಡಲು ಶ್ರಮಿಸುತ್ತಿದ್ದು, ಕರ್ತವ್ಯದ ಜತೆ ಆರೋಗ್ಯದ ಕಡೆಗೂ ಗಮನಹರಿಸುವುದು ಅನಿವಾರ್ಯ. ಜನತೆ ಸರ್ಕಾರದ ಲಾಕ್‌ಡೌನ್ ನಿಯಮ ಪಾಲಿಸಿದರೆ ಮಾತ್ರ ಕರೊನಾ ಸೋಂಕಿನಿಂದ ಸಮಾಜವನ್ನು ರಕ್ಷಿಸಬಹುದು ಎಂದು ತಿಳಿಸಿದರು.
ಪೊಲೀಸ್ ಸಿಬ್ಬಂದಿ ಸಿದ್ದೇಶ್, ಪ್ರತಿಭಾ, ಪ್ರವೀಣ್, ನಾಗರಾಜ್ ಇತರರಿದ್ದರು.